ಬಾಳೆ ಗಿಡಗಳನ್ನ ಕತ್ತರಿಸಿ ವಿಕೃತಿ ➤ ತಡರಾತ್ರಿ ಘಟನೆ

(ನ್ಯೂಸ್ ಕಡಬ) newskadaba.com ರಾಮನಗರ, ಜೂ6: ರಾಮನಗರದಲ್ಲಿ ಬರೋಬ್ಬರಿ 300ಕ್ಕೂ ಹೆಚ್ಚು ಬಾಳೆ ಗಿಡಗಳನ್ನ ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು! ದುಷ್ಕರ್ಮಿಗಳ ಗುಂಪೊಂದು ಸುಮಾರು 300ಕ್ಕೂ ಅಧಿಕ ಬಾಳೆ ಗಿಡಗಳನ್ನು ಕತ್ತರಿಸಿ ನಾಶ ಮಾಡಿರುವ ಘಟನ ತಡರಾತ್ರಿ ರಾಮನಗರದ ಕೂಟಗಲ್ ಹೋಬಳಿಯ ತಿಮ್ಮಸಂದ್ರ ಗ್ರಾಮದ ಪಟೇಲ್ ರಾಜಣ್ಣ ಅವರ ತೋಟದಲ್ಲಿ ನಡೆದಿದೆ. ತಡರಾತ್ರಿ ತೋಟಕ್ಕೆ ಎಂಟ್ರಿಕೊಟ್ಟ ಕಿಡಿಗೇಡಿಗಳು ಕಟಾವಿಗೆ ಬಂದಿದ್ದ 300ಕ್ಕೂ ಅಧಿಕ ಬಾಳೆಗಿಡಗಳನ್ನ ನಾಶ ಮಾಡಿ ವಿಕೃತಿ ಮೆರೆದಿದ್ದಾರೆ. ಪಟೇಲ್ ರಾಜಣ್ಣ ಅವರ 6 ಎಕರೆ ಅಡಿಕೆ ತೋಟದಲ್ಲಿ ಬಾಳೆ ಗಿಡಗಳನ್ನು ನೆಟ್ಟಿದ್ದರು, ಗಿಡಗಳು ಬೆಳೆದು ಗೊನೆಗಳು ಕಟಾವು ಮಾಡುವ ಹಂತಕ್ಕೆ ಬಂದಿದ್ದವು. ಆದರೆ ಈ ಸಂದರ್ಭವನ್ನ ನೋಡಿ ತೋಟಕ್ಕೆ ನುಗ್ಗಿದ ದುಷ್ಕರ್ಮಿಗಳು ಬಾಳೆ ಗಿಡಗಳನ್ನ ಬಲಿ ಪಡೆಯುವ ಮೂಲಕ ಅಟ್ಟಹಾಸ ಮೆರೆದಿದ್ಸಾರೆ.

Also Read  ಸುಬ್ರಹ್ಮಣ್ಯ ಠಾಣೆಗೆ ಐಜಿಪಿ ಅಮಿತ್ ಸಿಂಗ್ ಭೇಟಿ..!

ತೋಟದ ಒಂದು ಭಾಗದಲ್ಲಿ 300 ಕ್ಕೂ ಅಧಿಕ ಗಿಡಗಳನ್ನು ನಾಶ ಪಡಿಸಿ ಪರಾರಿಯಾಗಿದ್ದಾರೆ. ಬೆಳಿಗ್ಗೆ ತೋಟಕ್ಕೆ ಬಂದ ವೇಳೆ ಘಟನೆ ಬೆಳಕಿಗೆ ಬಂದಿದೆ ಎಂದು ನೊಂದ ರೈತ ಅಳಲು ತೋಡಿಕೊಂಡಿದ್ದಾರೆ. ಈ ಸಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಸುವ ಭರವಸೆಯನ್ನ ಪೊಲೀಸರು ನೀಡಿದ್ದಾರೆ. ಪೂರ್ವಪರ ದ್ವೇಷದಿಂದ ಈ ರೀತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

 

 

 

error: Content is protected !!
Scroll to Top