ಖ್ಯಾತ ಬಾಲಿವುಡ್ ನಿರ್ಮಾಪಕ ಅನಿಲ್ ಸೂರಿ ಕೊರೊನಾ ಸೋಂಕಿಗೆ ಬಲಿ

(ನ್ಯೂಸ್ ಕಡಬ) newskadaba.com ಮುಂಬೈ,ಜೂ 6 : ಖ್ಯಾತ ಬಾಲಿವುಡ್ ನಿರ್ಮಾಪಕ ಅನಿಲ್ ಸೂರಿಯವರು ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ. 77 ವಯಸ್ಸಿನ ಇವರಿಗೆ ಜೂನ್ 2 ರಂದು ತೀವ್ರ ಜ್ವರ ಕಾಣಿಸಿಕೊಂಡಿದ್ದು ಬಳಿಕ ನಂತರದ ದಿನವೇ ಉಸಿರಾಟದ ಸಮಸ್ಯೆ ಕೂಡಾ ತೀವ್ರವಾಗಿದೆ.

 

 

ಜೂನ್ 3 ರಂದು ಮುಂಬೈನ ಖ್ಯಾತ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದ್ದು ಅವರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ ಎಂದು ಅವರ ಸಹೋದರ ರಾಜೀವ್ ಸೂರಿ ಸುದ್ದಿ ಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ. ಅವರನ್ನು ಕೊನೆಗೆ ಬುಧವಾರ ರಾತ್ರಿ ವೇಳೆಗೆ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯೊಂದಕ್ಕೆ ದಾಖಲು ಮಾಡಲಾಗುತ್ತು. ಗುರುವಾರ ಸಂಜೆ ಅವರನ್ನು ವೆಂಟಿಲೇಟರ್ನಲ್ಲಿ ಇರಿಸಲಾಯಿತು. ಆದರೆ ಅಂದೇ ಅವರು ಕೊನೆಯುಸಿರೆಳೆದಿದ್ದಾರೆ. ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ ಎಂದು ಹೇಳಿದ್ದಾರೆ. ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅನಿಲ್ ಸೂರಿ ‘ಕರ್ಮಯೋಗಿ’ ಮತ್ತು ‘ರಾಜ್ ತಿಲಕ್’ನಂತಹ ಖ್ಯಾತ ಸಿನಿಮಾಗಳ ನಿರ್ಮಾಣ ಮಾಡಿದ್ದಾರೆ.

Also Read  ಹೊಸ ಎಲೆಕ್ಟ್ರಿಕ್ ಗಿಟಾರ್ ವ್ಯಾಪಾರ ಆರಂಭಿಸಿದ ಡೊನಾಲ್ಡ್ ಟ್ರಂಪ್

 

 

error: Content is protected !!
Scroll to Top