ಹಾಡು ಹಗಲಲ್ಲೇ ಉದ್ಯಮಿ ಹತ್ಯೆ ➤ ಬೆಚ್ಚಿ ಬೆದ್ದ ಮುಲ್ಕಿ

(ನ್ಯೂಸ್ ಕಡಬ) newskadaba.com ಮುಲ್ಕಿ, ಜೂ.6:  ಮೂಡಬಿದ್ರೆಯಲ್ಲಿ ಚಿನ್ನದ ಮಳಿಗೆ ಹೊಂದಿದ್ದ ಕಾಣಿಯೂರು ಸಮೀಪದ ಮುರುಳ್ಯ ಗ್ರಾಮದ ಯುವಕ ಅಬ್ದುಲ್ ಲತೀಫ್ ರವರನ್ನ ದುಷ್ಕರ್ಮಿಗಳ ತಂಡವೊಮದು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಜೂ.5 ರಂದು ಮುಲ್ಕಿಯಲ್ಲಿ ನಡೆದಿದೆ.

 

ಮೂಡ ಬಿದಿರೆಯ ಅಮರಶ್ರೀ ಚಿತ್ರ ಮಂದಿರದ ಬಳಿ ಅಲೈನ್ ಗೋಲ್ಡ್ ಎಂಬ ಹೆಸರಿನ ಚಿನ್ನದ ಮಳಿಗೆ ನಡೆಸುತ್ತಿದ್ದ ಯುವ ಉದ್ಯಮಿ ಅಬ್ದುಲ್ ಲತೀಫ್ ಅವರು, ತನ್ನ ಮಾನ ಮುನೀರ್ ಹಾಗೂ ಅವರ ಪುತ್ರ ಹಯಾತ್ ಎಂಬುವರ ಜೊತೆ ಮುಲ್ಕಿ ವಿಜಯಾ ಬ್ಯಾಂಕ್ ಬಳಿ ಕಾರಿನಲ್ಲಿ ಬರುತ್ತಿದ್ದ ವೇಳೆ ಅಲ್ಲಿಗೆ ಬಂದ ಐದು ಮಂದಿ ದುಷ್ಕರ್ಮಿಗಳ ತಂಡವೊಂದು ಚಾಕು ಮತ್ತು ಇನ್ನಿತರ ಮಾರಕಾಯುಧಗಳಿಂದ ಮೂವರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಮೂವರಿಗೂ ಮಾರಣಾಂತಿಕ ಹಲ್ಲೆಯಾಗಿದ್ದು ಕೂಡಲೇ ಅವರನ್ನ ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದ ಅಬ್ದುಲ್ ಲತೀಫ್ ಅವರು ಮೃತ ಪಟ್ಟಿದ್ದಾರೆ ಎ0ದು ತಿಳಿದು ಬಂದಿದೆ. ಸದ್ಯಕ್ಕೆ ದುಷ್ಕರ್ಮಿಗಳ ತಂಡ ಮೂವರಿಗೂ ಏಕಾಏಕಿ ದಾಳಿ ನಡೆಸಲು ಕಾರಣವೇನು ಎಂಬುವುದು ಮಾತ್ರ ತಿಳಿದು ಬಂದಿಲ್ಲ.

Also Read  ವ್ಯವಹಾರದಲ್ಲಿ ಲಾಭದ ಆಸೆ ಹುಟ್ಟಿಸಿ 2.50 ಕೋ.ರೂ. ವಂಚನೆ: ಪ್ರಕರಣ ದಾಖಲು

 

error: Content is protected !!
Scroll to Top