ಉಡುಪಿಯಲ್ಲಿ ಎರಡು ಮನೆಗಳು ಸೀಲ್ ಡೌನ್ ➤ ಕೋಟೆ ವ್ಯಾಪ್ತಿಯಲ್ಲಿ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com ಉಡುಪಿ ,ಜೂ 05: ಉಡುಪಿ ಜಿಲ್ಲೆಯ ಕಟಪಾಡಿಯ ಕೋಟೆ ಗ್ರಾಮ ಪಂಚಾಯತಿಯ ಮಟ್ಟುವಿನ ವಿಷ್ಣುಮೂರ್ತಿ ದೇವಸ್ಥಾನದ ಪಕ್ಕದ ಎರಡು ಮನೆಗಳು ಸೀಲ್ ಡೌನ್ ಗೆ ಒಳಗಾಗಿದೆ.

 

ಲಾಕ್ ಡೌನ್ ಬಳಿಕ ದುಬೈಯಿಂದ ಮಂಗಳೂರಿಗೆ ಬಂದ ಪ್ರಥಮ ವಿಮಾನದಲ್ಲಿ ಬಂದಿದ್ದ ಮಹಿಳೆಯೊರ್ವರು ಕ್ವಾರೆಂಟೈನ್ ಮುಗಿಸಿ ಮನೆಗೆ ಬಂದಿದ್ದರು. ಇದೀಗ ನಿನ್ನೆ (ಗುರುವಾರ) ಅವರಿಗೆ ಕೊವಿಡ್-19 ಸೋಂಕು ದೃಢವಾದ ಹಿನ್ನಲೆ, ಅವರದ ವಾಸದ ಮನೆ ಹಾಗು ಪಕ್ಕದ ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ. ಕಾಪು ತಹಶಿಲ್ದಾರ್ ಇಸಾಖ್ ಕಾಪು ಪಿ.ಎಸ್.ಐ ರಾಜಶೇಖರ ಸಾಗನೂರು ಹಾಗೂ ಇನ್ನಿತರ ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಇನ್ನು ಎರ್ಮಾಳು ಬಡಾ ಮೂಲದ ವ್ಯಕ್ತಿಗೆ ಸೋಂಕು ದೃಢವಾದ ಹಿನ್ನಲೆಯಲ್ಲಿ ಅಧಿಕಾರಿಗಳು ಮನೆ ಸೀಲ್ ಡೌನ್ ಮಾಡಿದ್ದಾರೆ. ಹೊರ ರಾಜ್ಯದಿಂದ ಬಂದು 14 ದಿನದ ಕ್ವಾರೆಂಟೈನ್ ಮುಗಿಸಿ ಮನೆಗೆ ಬಂದ ವ್ಯಕ್ತಿಗೆ ಕೊರೊನಾ ಸೋಂಕು ದೃಢವಾದ ಹಿನ್ನಲೆಯಲ್ಲಿ ಅವರು ವಾಸಿಸುತ್ತಿದ್ದ ಎರ್ಮಾಳು ಪಿಶರೀಸ್ ರಸ್ತೆಯ ಪಕ್ಕದ ಮನೆಯನ್ನು ಕೂಡ ಸೀಲ್ ಡೌನ್ ಮಾಡಲಾಗಿದೆ.

Also Read  ಮಡಿಕೇರಿ : ತ್ಯಾಜ್ಯ ಎಲ್ಲೆಂದರಲ್ಲಿ ಎಸೆದರೆ ದಂಡ    

 

error: Content is protected !!
Scroll to Top