ಉಪ್ಪಿನಂಗಡಿಗೆ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ಆಗಮನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಜೂ 04: ಜಿಲ್ಲಾಧಿಕಾರಿಗಳ ಆದೇಶದ ಅಣುಗಣವಾಗಿ ಹಾಗೂ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರುರವರ ಆದೇಶದಂತೆ  ಈ ಬಾರಿಯೂ ಗೃಹರಕ್ಷಕದಳದ ಪ್ರವಾಹ ರಕ್ಷಣಾ ತಂಡವನ್ನು ಉಪ್ಪಿನಂಗಡಿಯಲ್ಲಿ ರಚಿಸಲಾಗಿದೆ  ಕಾರ್ಯಚರಣೆ ಬಳಸುವ ರಬ್ಬರ್ ದೋಣಿ,,ಲೈಪ್ ಜಾಕೆಟ್, ಆಸ್ಕಲೈಟ್,ಮರಕತ್ತರಿಸುವ ಯಂತ್ರದೊಂದಿಗೆ ತಂಡ ಸಿದ್ದವಾಗಿದೆ  ಜೂನ್ ತಿಂಗಳಿನಿಂದ ಸೆಪೈಂಬರ್  ತಿಂಗಳ ಅಂತ್ಯದವರೆಗೆ ಈ ತಂಡ ಕಾರ್ಯ ನಿರ್ವಹಿಸಲಿದೆ.

 

ಉಪ್ಪಿನಂಗಡಿ ಗೃಹರಕ್ಷಕದಳದ ಘಟಕದಲ್ಲಿ  ಉಪ್ಪಿನಂಗಡಿ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ.ನೇತೃತ್ವದಲ್ಲಿ ಪ್ರವಾಹರಕ್ಷಣಾ ತಂಡ ವನ್ನು ರಚಿಸಲಾಗಿದೆ 3 ಜನ ಗೃಹರಕ್ಷಕರನ್ನು ಒಳಗೊಂಡ ಇ ತಂಡದಲ್ಲಿ ಒರ್ವ ನುರಿತ ಈಜುಗಾರ,ಎಲೆಕ್ಟೀಷಿಯನ್,ಕಟ್ಟಡ ನಿರ್ಮಾಣ ಪರಿಣತ ಇದ್ದು ಪ್ರವಾಹರಕ್ಷಣಾ ತಂಡದಲ್ಲಿ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ.,ಎ.ಎಸ್.ಎಲ್.ಜನಾರ್ಧನ ಆಚಾರ್ಯ, ವಸಂತ ಇದ್ದು ಇವರೆಲ್ಲರೂ ಪುತ್ತೂರು ತಹಶೀಲ್ದಾರ್, ಉಪ್ಪಿನಂಗಡಿ ಉಪ ತಹಶೀಲ್ದಾರ್ ನಿರ್ದೇಶದನ್ವಯ ಕಾರ್ಯನಿರ್ವಹಿಸಲ್ಲಿದ್ದಾರೆ.

Also Read  ಸಮುದ್ರಕ್ಕೆ ತೆರಳದಂತೆ - ಮೀನುಗಾರರಿಗೆ ಮುನ್ನೆಚ್ಚರಿಕೆ

 

error: Content is protected !!
Scroll to Top