ಉಡುಪಿ ಜಿಲ್ಲೆಯ 26 ಪ್ರದೇಶಗಳು ಸೀಲ್ ಡೌನ್

(ನ್ಯೂಸ್ ಕಡಬ) newskadaba.com ಕಡಬ,ಜೂ  04 .  ಉಡುಪಿ: ಕೊರೊನಾ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ 17 ಗ್ರಾಮಗಳ 26 ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯವೆಂದು ಗುರುತಿಸಿ  ಬುಧವಾರ ಸೀಲ್ ಡೌನ್ ಮಾಡಲಾಗಿದೆ.

ಕಾಪು ತಾಲೂಕಿನ ಶಿರ್ವ ಗ್ರಾಮ, ಬೈಂದೂರಿನ ಯಡ್ತರೆ  ಮರವಂತೆ  ಯಳಜಿತ್, ಜಡ್ಕಲ್, ನಾಡ, ಹಡವು, ಕೊಲ್ಲೂರು  ಮತ್ತು ಕುಂದಾಪುರ ತಾಲೂಕಿನ ಹೆಮ್ಮಾಡಿ ಗ್ರಾಮ  ತಲ್ಲೂರು, ಬೀಜಾಡಿ, ಗುಲ್ವಾಡಿ, ಕರ್ಕುಂಜೆ, ಹಕ್ಲಾಡಿ ಬ್ರಹ್ಮಾವರ ತಾಲೂಕಿನ ಕಳ್ತೂರು, ಕಾರ್ಕಳ ತಾಲೂಕಿನ ಇನ್ನಾ ಗ್ರಾಮದಲ್ಲಿ ಸೀಲ್ ಡೌನ್ ಮಾಡಲಾಗಿದೆ.

Also Read  ಕಡಬ ಸಿ.ಎ.ಬ್ಯಾಂಕ್ ಉಪಾಧ್ಯಕ್ಷರಿಗೆ ಹಲ್ಲೆ ಹಿನ್ನೆಲೆ ► ಕಡಬ ಪೇಟೆಯಲ್ಲಿ ಪೊಲೀಸರ ಸರ್ಪಗಾವಲು

ಖಾಸಗಿ ಎಕ್ಸ್ಪ್ರೆಸ್, ಸರ್ವೀಸ್, ಸಿಟಿ ಬಸ್ಸುಗಳು  ಕೆಲ ರೂಟ್ ಗಳಲಿ ಸಾಮಾಜಿಕ ಅಂತರದ ನಿಯಮ ಮರೆತು ಜನರನ್ನು ಹತ್ತಿಸಿಕೊಂಡು ಹೊಗುತ್ತಿರುವ ಬೇಜವಾಬ್ದಾರಿಯೂ ಬುಧವಾರ ಕಂಡು ಬಂದಿದೆ. ಇದೇ ರೀತಿ ಮುಂದುವರಿದರೆ ಇನ್ನಷ್ಟು ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

error: Content is protected !!
Scroll to Top