ವರದಕ್ಷಿಣೆ ಕಿರುಕುಳ ►ಸಿಗರೇಟ್ ನಿಂದ ಸುಟ್ಟು ಚಾಕುವಿನಿಂದ ಇರಿದು ಹಲ್ಲೆ

(ನ್ಯೂಸ್ ಕಡಬ) newskadaba.com ಬೆಳಗಾವಿ,ಸೆ.02, ಪತಿ ತನ್ನ ಪತ್ನಿಯ ಕೂದಲನ್ನು ಕತ್ತರಿಸಿ ಬಳಿಕ ಸಿಗರೇಟ್ ನಿಂದ ಸುಟ್ಟು ವಿಕೃತಿ ಮೆರೆದ ಘಟನೆಯೊಂದು ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

20 ವರ್ಷದ ಕಾವೇರಿ ವಾಲಿ ಎಂಬ ಮಹಿಳೆಯ ಮೇಲೆ ಪತಿ ಅರ್ಜುನ ಬಾಗರಾಯ್ ಈ ಕೃತ್ಯ ಎಸಗಿದ್ದಾನೆ.

ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ ಗುಮಾಸ್ತ ವೃತ್ತಿ ಮಾಡುತ್ತಿದ್ದ ಈತ ಕಳೆದ 6 ತಿಂಗಳಿಂದ ಬೆಂಗಳೂರಿನಲ್ಲಿ ತನ್ನ ಪತ್ನಿ ಜೊತೆ ನೆಲೆಸಿದ್ದಾನೆ. ಪ್ರತಿ ನಿತ್ಯವೂ ಮದ್ಯದ ಅಮಲಿನಲ್ಲಿ ಬಂದು ಪತಿ ತನ್ನ ವಿಕೃತಿ ಮೆರೆಯುತ್ತಾನೆ ಎನ್ನಲಾಗಿದೆ. ಪತ್ನಿಯ ತಲೆ ಕೂದಲು ಕತ್ತರಿಸಿ, ಸಿಗರೇಟ್ ನಿಂದ ಸುಟ್ಟು, ಚಾಕುವಿನಿಂದ ಹಲ್ಲೆಮಾಡಿ ಚಿತ್ರಹಿಂಸೆ ನೀಡಿದ್ದಾನೆ. ಅಲ್ಲದೇ ವರದಕ್ಷಿಣೆ ತರುವಂತೆ ನಿತ್ಯವೂ ಹಿಂಸೆ ನೀಡುತ್ತಿದ್ದಾನೆಂದು ಪತ್ನಿ ಕಾವೇರಿ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಸದ್ಯ ಪತಿಯ ವಿರುದ್ಧ ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Also Read  ಮರ್ಧಾಳ: ನೂತನವಾಗಿ ಆರಂಭಗೊಳ್ಳಲಿರುವ ಶರೀಅತ್ ಮಹಿಳಾ ಕಾಲೇಜಿಗೆ ದಾಖಲಾತಿ ಆರಂಭ ► ವಾಣಿಜ್ಯ ವಿಭಾಗದ ಎಲ್ಲಾ ವಿಷಯಗಳಿಗೆ ಉಪನ್ಯಾಸಕರು ಬೇಕಾಗಿದ್ದಾರೆ

 

error: Content is protected !!
Scroll to Top