ಮಂಗಳೂರು: ಕೊರೊನಾ ವಿರುದ್ಧ ಹೋರಾಡಿ ಸಾವನ್ನು ಗೆದ್ದು ಬಂದ ಅಸ್ತಮಾ ರೋಗಿ..!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.30., ಕೊರೊನಾ… ಕೊರೊನಾ….  ಕೊರೊನಾ….. ಎಲ್ಲಿ ಹೋದರೂ ಅಲ್ಲಿ ಕೊರೊನಾದೆ ಸುದ್ಧಿ… ಅದೆಷ್ಟೋ ಮಂದಿ ಕೊರೊನಾಗೆ ಬಲಿಯಾಗಿದ್ದು, ಮತ್ತೆ ಕೆಲವರೂ ಸಾವನ್ನೂ ಗೆದ್ದು ಬಂದವರೂ ಇದ್ದಾರೆ. ಅಂತಹುದೇ ಪವಾಡ ಮಂಗಳೂರಿನಲ್ಲಿ ನಡೆದಿದೆ.


ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 68 ವರ್ಷದ ವೃದ್ಧೆಯೊಬ್ಬರು ಕೊರೊನಾ ಗೆದ್ದು ಬಂದಿದ್ದಾರೆ. ಸುರತ್ಕಲ್ ಮೂಲದ 68 ವರ್ಷದ ಮಹಿಳೆ ಹೃದಯ ಸಂಬಂಧಿ ಖಾಯಿಲೆಂಯಿಂದ ಬಳಲುತ್ತಿದ್ದ ಇವರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಮೇ 15ರಂದು ರಿಪೋರ್ಟಲ್ಲಿ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

ಅಸ್ತಮಾ, ಬಿಪಿ, ಶುಗರ್ ಸೇರಿದಂತೆ ವಿವಿಧ ಖಾಯಿಲೆಯಿಂದ ಬಳಲುತ್ತಿದ್ದ ಇವರನ್ನು ವೆನ್ಲಾಕ್ ನ ಐಸಿಯುಗೆ ಶಿಫ್ಟ್ ಮಾಡಿ ಚಿಕಿತ್ಸೆ ನೀಡಲಾಯಿತು. ಅವರ ಅರೋಗ್ಯ ದಿನದಿಂದ ದಿನಕ್ಕೆ ಹದಗೆಟ್ಟುತ್ತಲೇ ಹೋಯಿತು, ಮನೆಯವರೂ ವೃಧ್ಧೆಯ ಆಸೆ ಕೈಬಿಟ್ಟಿದ್ದರು. ಹೀಗೆ ಚಿಕಿತ್ಸೆ ಮುಂದುವರಿದು 14 ದಿನಗಳ ಕಾಲ ಕೊರೊನಾ ವಿರುದ್ಧ ಹೋರಾಡಿ ಸಾವನ್ನು ಗೆದ್ದು ಬಂದಿದ್ದಾರೆ.

Also Read  Workplace 2024 Activation free of Charge With .TXT Activator [2024 Information]


ವೆನ್ಲಾಕ್ ನ ಐಸಿಯುವಿನಲ್ಲಿ ಅಲ್ಟ್ರಾ ಸೌಂಡ್ ಸ್ಕಾನ್ ನಿಂದ ಹಿಡಿದು ಎಲ್ಲಾ ಬಗೆಯ ಟೆಸ್ಟ್ ಗಳ ಅನುಕೂಲಗಳು ಇದೆ. ಉತ್ತಮ ರೀತಿಯ ಚಿಕಿತ್ಸೆ ಕೊಡಲು ಪೂರಕವಾದ ವಾತಾವರಣವನ್ನು ಇಲ್ಲಿ ನಿರ್ಮಿಸಿಕೊಡಲಾಗಿದೆ.

68 ವರ್ಷದ ವೃದ್ಧೆಯ ಶ್ವಾಸಕೋಶಕ್ಕೂ ಕೂಡ ಕೊರೊನಾ ಸೋಂಕು ಹಾನಿ ಮಾಡಿದ್ದನ್ನು ಇಲ್ಲಿ ಗುಣಪಡಿಸಲಾದೆ. ವೃದ್ಧೆಯ ಜೊತೆ ಮತ್ತೋರ್ವ ಕೊರೊನಾ ಹಾಗೂ ಪಾಶ್ರ್ರ್ವವಾಯುವಿನಿಂದ ಬಳಲುತ್ತಿದ್ದು ಚಿಕಿತ್ಸೆ ಬಳಿಕ ಗುಣಮುಖರಾಗಿ ಡಿಸ್ಜಾರ್ಜ್ ಆಗಿದ್ದಾರೆ.

error: Content is protected !!
Scroll to Top