(ನ್ಯೂಸ್ ಕಡಬ) newskadaba.com ಬೆಂಗಳೂರು, ಮೇ.29. ಕೊರೋನಾ ಹಿನ್ನಲೆಯಲ್ಲಿ 5.0 ಹಂತದ ಲಾಕ್ ಡೌನ್ ಜೂನ್.1 ರಿಂದ ಮತ್ತೆ ಮುಂದುವವರಿಯಲಿದೆ.
ಮುಂದಿನ ಲಾಕ್‍ಡೌನ್ ರಾಜ್ಯದಲ್ಲಿ ಕೊಂಚ ಸಡಿಲಿಕೆ ಕಾಣಲಿದ್ದು, ಹೊಟೇಲ್, ಜಿಮ್, ಹಾಗೂ ಎಲ್ಲಾ ಧರ್ಮದ ದೇವಾಲಯಗಳನ್ನು ತೆರೆಯಲು ಅನುಮತಿ ದೊರಕಿದೆ.
ರಾಜ್ಯದ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಈ ಬಗ್ಗೆ ತೀರ್ಮಾಣ ತೆಗೆದು ಕೊಂಡಿದ್ದಾರೆ, ಮುಂದಿನ ಹಂತದ ಲಾಕ್‍ಡೌನ್ ಸಡಿಲಿಕೆ ಬಗ್ಗೆ ಕ್ಯಾಬಿನೆಟ್ ಸಭೆಯಲ್ಲಿ ಎಲ್ಲಾ ಸಚಿವರಿಂದ ಅಭಿಪ್ರಾಯ ಸಂಗ್ರಹಿಸಿ ಹೊಟೇಲ್, ಜಿಮ್, ದೇವಸ್ಥಾನ, ಮಸೀದಿ, ಚರ್ಚ್ ಗಳನ್ನು ತೆರೆಯಲು ಸಮ್ಮತಿಸಿದ್ದಾರೆ.
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾದಿಂದಾಗಿ ಮೆಟ್ರೋ, ಮಾಲ್ ವಿಚಾರವಾಗಿ ಕೇಂದ್ರ ಸರಕಾರದ ಮಾರ್ಗಸೂಚಿಯನ್ನು ಅನುಸರಿಬೇಕೆಂದು ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನಿಸಲಾಯಿತು.