ಲಕ್ಷದ್ವೀಪದಲ್ಲಿ ಬಾಕಿಯಾಗಿದ್ದ 19 ಜನ ಕಾರ್ಮಿಕರ ರಕ್ಷಣೆ

(ನ್ಯೂಸ್ ಕಡಬ) newskadaba.com ಕಡಬ, ಮೇ.28. ಮಂಗಳೂರು : ಸಾಗರದಾಚೆಗೆ ಅತಂತ್ರರಾಗಿದ್ದ  ಕಾರ್ಮಿಕರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಗಳು ರಕ್ಷಣೆ ಮಾಡಿ  ಎರಡು ತಿಂಗಳ ಬಳಿಕ  ಮಂಗಳೂರಿಗೆ  ಕರೆತಂದಿದ್ದಾರೆ.

ಲಕ್ಷದ್ವೀಪದಲ್ಲಿ ಬಾಕಿಯಾಗಿದ್ದ ಮೂವರು ಮಹಿಳೆಯರು ಸೇರಿದಂತೆ 19 ಮಂದಿ ಕಾರ್ಮಿಕರು ಇಂದು ಅಮಿನ್ ದಿವಿ  ನೌಕೆಯಲ್ಲಿ ಮಂಗಳೂರಿಗೆ ವಾಪಾಸ್ಸಾಗಿದ್ದಾರೆ. ಈ ಕಾರ್ಮಿಕರು ತಮ್ಮ ಹೊಟ್ಟೆ ಪಾಡಿಗಾಗಿ  ವ್ಯಾಪಾರ, ಟೈಲ್ಸ್ ಕೆಲಸ, ಗುಜುರಿ ಸಂಗ್ರಹ ಸೇರಿದಂತೆ ವಿವಿಧ ಕೆಲಸಕ್ಕೆಂದು  ಲಕ್ಷದ್ವೀಪಕ್ಕೆ ತೆರಳಿದ್ದರು. ಆದರೆ, ಲಾಕ್ಡೌನ್ ಹಿನ್ನಲೆ ಅವರು ಅಲ್ಲೆ ಉಳಿದುಕೊಳ್ಳಬೇಕಾಯಿತು. ಇಂದು ಇಂಡಿಯನ್ ಕೋಸ್ಟ್ ಗಾರ್ಡ್ ಗಳ ಸಹಾಯದಿಂದ ಮಂಗಳೂರಿಗೆ ವಾಪಾಸ್ಸಾಗಿದ್ದಾರೆ. ಬಂದವರನ್ನೆಲ್ಲಾ  ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ.

Also Read  ಸುಳ್ಯ ನೂತನ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಬಿ.ಇ ರಮೇಶ್ ಅಧಿಕಾರ ಸ್ವೀಕಾರ

error: Content is protected !!