ಜೂನ್ 1ರಿಂದ ಪುತ್ತೂರು ಮಹಾಲಿಂಗೇಶ್ವರನ ದರ್ಶನ ಸಾಧ್ಯವೇ..??

(ನ್ಯೂಸ್ ಕಡಬ) newskadaba.com ಕಡಬ, ಮೇ.28,. ಕೊರೋನಾ ಮುನ್ನೆಚ್ಚರಿಕೆ ಕ್ರಮವಾಗಿ ಮಾ. 23 ರ ಲಾಕ್‍ಡೌನ್ ಘೋಷಣೆಯ ಬಳಿಕ ಭಕ್ತರಿಗೂ ದೇವರ ದರ್ಶನಕ್ಕೆ ನಿರ್ಭಂಧ ಹಾಕಲಾಗಿತ್ತು.

ಇದೀಗ ಸರಕಾರದ ಆದೇಶದಂತೆ ಜೂನ್ 1 ರಿಂದ ಎ ಗ್ರೇಡ್  ದೇವಸ್ಥಾನಗಳಿಗೆ ಪ್ರವೇಶಾವಕಾಶ ನೀಡುವ ಕುರಿತು ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಗೇಶ್ವರ ದೇವಸ್ಥಾನ ಆಡಳಿತ ಕಚೇರಿಯಲ್ಲಿ ಮೇ. 29ರಂದು ದೇವಳ್ಯದ ಆಡಳಿತ ಅಧಿಕಾರಿಯೂ ಸಹಾಯಕ ಕಮೀಷನರರೂ ಆದ ಡಾ. ಯತೀಶ್ ಉಳ್ಳಾಲ್ ನೇತೃತ್ವದಲ್ಲಿ ಸಭೆ ಕರೆಯಲಾಗಿದೆ.

ಜೂನ್ 1ರಿಂದ ಪುತ್ತೂರು ದೇವಾಲಯದಲ್ಲಿ ಭಕ್ತರಿಗೆ ಪ್ರವೇಶಾವಕಾಶ ನೀಡಿದರೂ ಎರಡು ಬಾಗಿಲುಗಳ ಬಳಿ ಸಾನಿಟೈಸಿಂಗ್ ವ್ಯವಸ್ಥೆ, ಸಾಮಾಜಿಕ ಅಂತರದ ಸರದಿಯ ಸಾಲು, ನಿಗದಿತ ಸಂಖ್ಯೆಯಲ್ಲಿ ಭಕ್ತರ ಆಗಮನ, ಪೂಜೆಯ ಸಂಧರ್ಭ ಗರ್ಭಗುಡಿಯ ಬಳಿ ನೂಕು ನುಗ್ಗಲು ನಿಯಂತ್ರಣ ಇತ್ಯಾದಿ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸತಕ್ಕದ್ದು.

error: Content is protected !!

Join the Group

Join WhatsApp Group