ಗುಂಡಿನ ದಾಳಿನಡೆಸಿದ ಬೆಂಗಳೂರಿನ ಉದ್ಯಮಿ

(ನ್ಯೂಸ್ ಕಡಬ) newskadaba.com ಕಡಬ, ಮೇ.28. ಚಿಕ್ಕಮಗಳೂರು : ರಿಯಲ್ ಎಸ್ಟೇಟ್ ಡೀಲ್ ವೇಳೆ  ಮಾತಿಗೆ ಮಾತು ಬೆಳೆದು  ಇಬ್ಬರ ಮೇಲೆ ಗುಂಡಿನ ದಾಳಿ ನಡೆದ ಘಟನೆ ಮಂಗಳವಾರ ಮಧ್ಯರಾತ್ರಿ  ನಡೆದಿದೆ.

ಬೆಂಗಳೂರಿನ ಇಬ್ಬರು ಉದ್ಯಮಿಗಳು ಚಿಕ್ಕಮಗಳೂರಿನ ಇಬ್ಬರ ಮೇಲೆ ಗುಂಡಿನ ದಾಳಿ  ನಡೆಸಿದ್ದಾರೆ. ಕಡೂರು ತಾಲೂಕಿನ ಬಾಣೂರು ಗ್ರಾಮದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಇಬ್ಬರಿಗೆ ತೀವ್ರ ಗಾಯಗಳಾಗಿದೆ.

ಕಲ್ಯಾಣ್ ಕುಮಾರ್ ಹಾಗೂ ಉಪನ್ಯಾಸಕ ಸುಮಂತ್ ಎಂಬುವರಿಗೆ ಎದೆ, ತೋಳಿನ ಭಾಗಕ್ಕೆ ಗುಂಡು ತಗುಲಿದ್ದು, ಇಬ್ಬರನ್ನು ಪ್ರಾಥಮಿಕ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ರವಾನಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಸಖರಾಯಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Also Read  ಮಂಗಳೂರು: ಮೊಬೈಲ್ ಕಳ್ಳತನ ➤ ಇಬ್ಬರು ಅರೆಸ್ಟ್

error: Content is protected !!
Scroll to Top