(ನ್ಯೂಸ್ ಕಡಬ) newskadaba.com ಕಡಬ, ಮೇ.28.ಬೆಂಗಳೂರು: ಮೈಸೂರು ಜಿಲ್ಲೆಯ ಹಕ್ಕಿ ಪಿಕ್ಕಿ ಸಮುದಾಯಕ್ಕೆ ಸೇರಿದ ಆರು ಜನರ 2 ಕುಟುಂಬಗಳು ಲಾಕ್‍ಡೌನ್‍ನಿಂದಾಗಿ ಎರಡೂವರೆ ತಿಂಗಳಿನಿಂದ ಕತಾರ್ನಲ್ಲಿ ಸಿಲುಕಿಕೊಂಡು ಒದ್ದಾಡುತ್ತೀವೆ.
ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಪಕ್ಷರೇಶ್ವರ ಎಂಬ ಹಳ್ಳಿಯ ಕಾಡಂಚಿನಲ್ಲಿರುವ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ ಕುಟುಂಬ ಕಾಡಲ್ಲಿ ಸಿಗುವ ಗಿಡಮೂಲಿಕೆಗಳಿಂದ ವನೌಷಧ, ಮಸಾಜ್ ಮಾಡುವ ತೈಲ ತಯಾರಿಸಿ ವಿವಿಧೆಡೆಯ ಆಯುರ್ವೇದ ಮೇಳಗಳಲ್ಲಿ ಮಾರುತ್ತದೆ. ಇದೇ ರೀತಿಯ ಮೇಳ ಕತಾರ್ನಲ್ಲಿಯೂ ಇದ್ದುದರಿಂದ ಹೋಗಿದ್ದವು. ಆದರೆ ಈ ಬಾರಿ ಅಲ್ಲಿ ಲಾಕ್ಡೌನ್ ಘೋಷಣೆಯಾಗಿ ಮೇಳ ರದ್ದುಗೊಂಡು ಅಲ್ಲಿಂದ ವಾಪಾಸಗಳು ಆಗದೆ ಅಲ್ಲೆ ಸಿಲುಕಿಕೊಂಡಿವೆ.
ದಿಕ್ಕು ತೋಚದಂತಾದ ಕುಟುಂಬಗಳು ತಾವು ಸಂಕಷ್ಟದಲ್ಲಿರುವ ಮಾಹಿತಿಯನ್ನು ರಾಯಭಾರ ಕಚೇರಿಗೆ ತಿಳಿಸಿದ್ದು, ಅನಂತರ ಕನ್ನಡ ಸಂಘಕ್ಕೆ ತಿಳಿದು ಅವರಿಗೆ ಬೇಕಾದ ಆಹಾರ ಸಾಮಗ್ರಿ ಒದಗಿಸಿದೆ. ಇವರಿಗೀಗ ವಾಪಸ್ ಬರಲು ಹಣವೂ ಇಲ್ಲ. ಕೈ ಮುಗಿಯುತ್ತೇವೆ, ನಮ್ಮನ್ನು ಊರಿಗೆ ಕಳುಹಿಸಿಕೊಡಿ ಎಂದು ಅಂಗಲಾಚುತ್ತಿದ್ದಾರೆ.