ಮುಂದಿನ ಲಾಕ್ಡೌನ್ ನಿರ್ಧಾರದಿಂದ ಅನ್ಲಾಕ್ ಆದ ಕೇಂದ್ರ ಸರಕಾರ >ಲಾಕ್ಡೌನ್ ನಿರ್ಧರಿಸಲಿದೆಯೇ? ರಾಜ್ಯ ಸರಕಾರ

(ನ್ಯೂಸ್ ಕಡಬ) newskadaba.com ಕಡಬ, ಮೇ.27.  ಹೊಸದಿಲ್ಲಿ:ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್ಡೌನ್ ನಿಯಮಗಳನ್ನು ಮೇ 31ರ ನಂತರ ರೂಪಿಸುವ ನಿರ್ಧಾರವನ್ನು ರಾಜ್ಯ ಸರಕಾರಗಳಿಗೆ ಬಿಡಲು ಕೇಂದ್ರ ಮುಂದಾಗುವ ಸಾಧ್ಯತೆ ಇದೆ. ಕೇಂದ್ರದ ಉನ್ನತ ಮೂಲಗಳ ಪ್ರಕಾರ . ತಮ್ಮ ರಾಜ್ಯದ ಪರಿಸ್ಥಿತಿ ಆಧರಿಸಿ ನಿಯಮಗಳನ್ನು ರಾಜ್ಯಗಳು ರೂಪಿಸಬಹುದು ಎಂದು ತಿಳಿಸಬಹುದು ಎನ್ನಲಾಗುತ್ತಿದೆ.

ಮೇ 31ರ ನಂತರ ಲಾಕ್ಡೌನ್ ಮುಂದುವರೆಸುವುದೋ ಬೇಡವೋ ಎಂಬ ಆಯ್ಕೆಯನ್ನು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ನೀಡಲು ಮುಂದಾಗಿದೆ ಎನ್ನಲಾಗುತ್ತಿದೆ.

ಆದರೆ, ಅಂತರಾಷ್ಟ್ರೀಯ ವಿಮಾನ ಸಂಚಾರ ಮತ್ತು ಶಾಲಾ, ಕಾಲೇಜುಗಳ ಮರು ಪ್ರಾರಂಭದ ನಿರ್ಧಾರಗಳನ್ನು ಕೇಂದ್ರವೇ ತೆಗೆದುಕೊಳ್ಳುತ್ತದೆ ಎಂದು ಸರಕಾರದ ಉನ್ನತ ಮೂಲಗಳು ತಿಳಿಸಿವೆ.

Also Read  ಪ್ರತಿ ತಾಲ್ಲೂಕಿನಲ್ಲೂ ಕೋವಿಡ್ ಆಸ್ಪತ್ರೆ   ➤ ಆರೋಗ್ಯ ಸಚಿವ ಡಾ.ಕೆ.ಸುಧಾಕರ್       

ಇದರ ಜೊತೆ ಎಲ್ಲ ನಿರ್ಬಂಧಗಳನ್ನು ತೆರವುಗೊಳಿಸುವವರೆಗೂ, ಪರಿಸ್ಥಿತಿಯನ್ನು ಆಧರಿಸಿ ಲಾಕ್ಡೌನ್ ನಿಯಮಗಳನ್ನು ಪ್ರತಿ 14 ದಿನಗಳಿಗೊಮ್ಮೆ ಪರಿಷ್ಕರಿಸಲಾಗುವುದು ಎನ್ನಲಾಗಿದೆ. ಕೊರೊನಾ ನಿರ್ವಹಣೆಗಾಗಿ ಸೂಚಿಸಲಾದ ಕಡ್ಡಾಯ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತಹ ನಿಯಮಗಳನ್ನು ಮಾತ್ರ ಕೇಂದ್ರ ಜಾರಿಗೆ ತರುವ ಸಾಧ್ಯತೆ ಇದ್ದು, ಉಳಿದ ನಿಯಮಗಳನ್ನು ರೂಪಿಸುವ ಜಾರಿ ತರುವ ಕರ್ತವ್ಯ ರಾಜ್ಯಗಳ ಮೇಲೆ ಹೋರಿಸಲಿದೆ.

error: Content is protected !!
Scroll to Top