(ನ್ಯೂಸ್ ಕಡಬ) newskadaba.com ಕಡಬ, ಮೇ.27, ರಾಜ್ಯದಲ್ಲಿ ದೇವಸ್ಥಾನಗಳು ಜೂನ್ 1ನೇ ತಾರೀಖಿನಿಂದ ಸಾರ್ವಜನಿಕರ ದರ್ಶನಕ್ಕೆ ಲಭ್ಯವಾಗಲಿವೆ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಬುಧವಾರ ಹೇಳಿದರು.
ಕೇಂದ್ರ ಸರಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಜೂನ್ 1ನೇ ತಾರೀಖಿನ ಬಳಿಕ ಎಲ್ಲದಕ್ಕೂ ಬಹುಪಾಲು ಕೇಂದ್ರದಿಂದ ಅನುಮತಿ ಸಿಗಬಹುದು. ದೇವಸ್ಥಾನಗಳು ಓಪನ್ ಆದರೆ ಚರ್ಚ್, ಮಸೀದಿಗಳು ಆಗಲೇಬೇಕು ಎಂದು ಅವರು ತಿಳಿಸಿದ್ದಾರೆ.
ಧಾರ್ಮಿಕ ಶ್ರದ್ಧಾಕೇಂದ್ರಗಳನ್ನು ತೆರೆದ ಬಳಿಕ ಅನುಸರಿಸಬೇಕಾದ ನಿಭಂದನೆಗಳ ಕುರಿತು ಧರ್ಮಸ್ಥಳದ ಧರ್ಮಾಧಿಕಾರಿಗಳು ಡಾ.ವೀರೇಂದ್ರ ಹೆಗ್ಗಡೆಯವರು ಕೆಲವು ಸಲಹೆಗಳನ್ನು ಕೊಟ್ಟಿದ್ದಾರೆ. ಎಲ್ಲ ಭಕ್ತರೂ ದೇವರ ದರ್ಶನ ಮಾಡಿದ ಬಳಿಕ ತೆರಳಬೇಕು. ಅಲ್ಲಿನ ರೂಂಗಳಲ್ಲಿ ಉಳಿದುಕೊಳ್ಳಬಾರದು ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕೆಂದು ಧರ್ಮಾಧಿಕಾರಿಗಳು ಸಲಹೆ ಕೊಟ್ಟಿದ್ದಾರೆ ಎಂದರು.