ಮಾಸ್ಕ್ ವಿಚಾರ ಗುಂಪುಗಳ ಮಧ್ಯೆ ಮಾರಾಮಾರಿ

(ನ್ಯೂಸ್ ಕಡಬ) newskadaba.com ಕಡಬ, ಮೇ.27. ಪುತ್ತೂರು: ಮಾಸ್ಕ್ ಹಾಕದೆ ಖಾಸಗಿ ಮಳಿಗೆಗೆ ಆಗಮಿಸಿದ ಗ್ರಾಹಕನೊಂದಿಗೆ ವಿಚಾರಿಸಿದ್ದಕ್ಕೆ  ಹೊಡೆದಾಟ ನಡೆದಿರುವ ಘಟನೆ ಮಂಗಳವಾರದಂದು  ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ  ನಡೆದಿದೆ.

ಪುತ್ತೂರಿನಲ್ಲಿರುವ ಖಾಸಗಿ ಮಳಿಗೆಯ ಮುಂಭಾಗದಲ್ಲಿ ಖರೀದಿಗೆ ಆಗಮಿಸಿದ್ದ ಗ್ರಾಹಕನೊಬ್ಬ ಮಾಸ್ಕ್ ಹಾಕದೇ ಸಾಲಿನಲ್ಲಿ ನಿಂತಿದ್ದ. ಕೋವಿಡ್ ವೈರಸ್ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿರುವುದರಿಂದ ಮಾಸ್ಕ್ ಧರಿಸದ ಗ್ರಾಹನಿಗೆ ಮಳಿಗೆಯ ಸಿಬ್ಬಂದಿಗಳು ಖರೀದಿಗೆ ಪ್ರವೇಶ ನಿರಾಕರಿಸಿದರು.

Also Read  ಪಿಎಸ್‌ಐ ನೇಮಕಾತಿ ಹಗರಣ ➤ ಆರೋಪಿ ಹರೀಶ್‌ಗೆ ಜಾಮೀನು ನಿರಾಕರಿಸಿದ ಕರ್ನಾಟಕ ಹೈಕೋರ್ಟ್

ಇದರಿಂದ ಸಿಡಿಮಿಡಿಗೊಂಡ ಗ್ರಾಹಕ ತನ್ನ ಸ್ನೇಹಿತರ ಜೊತೆ ಸೇರಿ ಖಾಸಗಿ ಮಳಿಗೆಯ ಸಿಬ್ಬಂದಿಗಳ ಮೇಲೆ ಹಲ್ಲೆಗೆ ಮುಂದಾಗಿದ್ದು, ಎರಡು ತಂಡದ ಮಧ್ಯೆ ಗುದ್ದಾಟ ನಡೆದಿದೆ. ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಆಗಮಿಸಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

 

error: Content is protected !!
Scroll to Top