ಚಂದನ ಸಾಹಿತ್ಯ ವೇದಿಕೆ ವತಿಯಿಂದ ಆನ್ ಲೈನಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ

(ನ್ಯೂಸ್ ಕಡಬ) newskadaba.com  ಕಡಬ,ಮೇ.27:  ಸುಳ್ಯದ ಚಂದನ ಸಾಹಿತ್ಯ ವೇದಿಕೆಯು ಸಾಮಾಜಿಕ ಜಾಲತಾಣವಾದ ವಾಟ್ಸಪ್ಪನಲ್ಲಿ ರಾಜ್ಯಮಟ್ಟದ ಚಂದನ ಕವಿಗೋಷ್ಠಿ ಯು ಇತ್ತೀಚೆಗೆ ನಡೆಯಿತು.

ರಾಜ್ಯಮಟ್ಟದ ಚಂದನ ಆನ್ ಲೈನ್ ಕವಿಗೋಷ್ಠಿ ಉದ್ಘಾಟನೆಯನ್ನು ಹರಿನರಸಿಂಹ ಉಪಾಧ್ಯಾಯ  ಬೆಂಗಳೂರು ಇವರು ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಸಾಹಿತಿ ಮತ್ತು ಶಿಕ್ಷಕರಾದ ಜಮಖಂಡಿಯ ದಾಮೋದರ್ ಬಡಿಗೇರ್ ಮತ್ತು ಮಂಗಳೂರಿನ  ಖ್ಯಾತ ಮದರಂಗಿ ಪತ್ರಿಕಾ ಸಂಪಾದಕರಾದ ಅಬೂಬಕರ್ ಕೈರಂಗಳ ರವರು ಮುಖ್ಯ ಅತಿಥಿಗಳಾಗಿ ಮಾತನಾಡಿದರು .

ಕವಿಗೋಷ್ಠಿ ಅಧ್ಯಕ್ಷತೆಯನ್ನು ಖ್ಯಾತ ಕವಿಗಳು, ಪತ್ರಕರ್ತರೂ ಆದ ಬಲ್ಲೇನಹಳ್ಳಿ ಮಂಜುನಾಥ್ ಕೆ.ಆರ್ ಪೇಟೆ ರವರು ಅಧ್ಯಕ್ಷೀಯ ಭಾಷಣ ಮಾಡಿದರು.ಪ್ರಮೀಳಾರಾಜ್ ಸುಳ್ಯರವರು ಪ್ರಾರ್ಥನೆ ಗೀತೆ ಹಾಡಿದರು. ಸ್ವಾಗತ ಭಾಷಣವನ್ನು  ಅಬೂಬಕರ್ ಅನಿಲಕಟ್ಟೆ  ವಿಟ್ಲ ರವರು ಮಾಡಿದರು . ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ  ಎಚ್. ಭೀಮರಾವ್ ವಾಷ್ಠರ್ ರವರು ಪ್ರಾಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮ ನಿರೂಪಿಸಿದರು .ದಿಲೀಪ್ ವೇದಿಕ್ ಕಡಬರವರು ವಂದನಾರ್ಪಣೆ ಸಲ್ಲಿಸಿದರು.

Also Read  ಬಿಎಂಟಿಸಿಯ ನೂತನ ಬಸ್ ಗಳಿಗೆ ಸಿಎಂ ಚಾಲನೆ

ಇಡೀ ಒಂದು ದಿನ ನಡೆದ ಚಂದನ ಕವಿಗೋಷ್ಠಿಯಲ್ಲಿ ರಾಜ್ಯದ ನಾನಾ ಜಿಲ್ಲೆಗಳಿಂದ  30 ಕವಿಗಳು ಉತ್ಸುಕತೆಯಿಂದ ಭಾಗವಹಿಸಿದ್ದರು . ಚಂದನ ಕವಿಗೋಷ್ಠಿ ಕಾರ್ಯಕ್ರಮದಲ್ಲಿ  ಎಚ್ .ವಿಠ್ಠಲ್ ವಾಷ್ಠರ್ ಬ್ರಹ್ಮಾವರ, ಪ್ರೀತಿ ಭರತ ಬೆಂಗಳೂರು, ಸಾನು ಉಬರಡ್ಕ ಸುಳ್ಯ, ಅಪ್ಪಯ್ಯ ಯಾದವ್ ಕಾಸರಗೋಡು, ರತ್ನತನಯ, ಹರಿನರಸಿಂಹ ಉಪಾಧ್ಯಾಯ, ಬೆಂಗಳೂರು, ನಾರಾಯಣ ಕುಂಬ್ರ, ಕೆ.ಎ.ಅಬ್ದುಲ್ ಅಝೀಝ್ ಪುಣಚ ಮಂಗಳೂರು, ಪ್ರಮೀಳಾ ರಾಜ್ ಸುಳ್ಯ, ಲತಾಶ್ರೀ ಸುಪ್ರೀತ್ ಮೊಂಟಡ್ಕ ಸುಳ್ಯ, ಮಹಾದೇವ್ ರಾಯಚೂರು, ಲೀಲಾಕುಮಾರಿ  ತೊಡಿಕಾನ, ಚೊ ಶಿ ವಿ ಹೂಯಿಲಗೋಳ , ಅಣ್ಣಪ್ಪ ಮೇಟಿಗೌಡ ಮಾನ್ವಿ, ವಿಜಯ ಕುಮಾರ್ ಕಾಣಿಚ್ಚಾರ್ ಸುಳ್ಯ, ಶ್ರೀ ಆನಂದ್ ಹಕ್ಕೆನ್ನವರ್, ಸುಜಯ ಕೃಷ್ಣ ಬೀರಮಂಗಲ ಸುಳ್ಯ , ಮಮತಾ ರವೀಶ್ ಪಡ್ಡoಬೈಲ್ ಸುಳ್ಯ, ಶಂಕರರಾವ್ ಉಭಾಳೆ ದೇವದುರ್ಗ, ಡಾ.ಗುರುಸಿದ್ದಯ್ಯ ಸ್ವಾಮಿ ಅಕ್ಕಲಕೋಟ,  ಛಾಯಾ ಬಿ ಆರ್ ಅರಸೀಕೆರೆ, ಸಮ್ಯಕ್ತ್ ಹೆಚ್ ಜೈನ ಕಡಬ, ಗಾಯತ್ರಿ ಜಟ್ಟಿಪಳ್ಳ ಸುಳ್ಯ,  ಶಿವಾನಂದ್ ಲಾಳಸಂಗಿ ಲಿಂಗಸಗೂರು, ಪೆರುಮಾಳ್ ಐವರ್ನಾಡು ಸುಳ್ಯ, ಹಕ್ಕಿ ಬಜಪೆ ಮಂಗಳೂರು, ಅಬೂಬಕರ್ ಅನಿಲಕಟ್ಟೆ ವಿಟ್ಲ ಮತ್ತು ಈರಯ್ಯ  ಎಸ್.ಬಿ ಬೀಳಗಿ ಭಾಗವಹಿಸಿದ್ದರು ಎಂದು ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ ಎಚ್ .ಭೀಮರಾವ್ ವಾಷ್ಠರ್ ಸುಳ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

error: Content is protected !!
Scroll to Top