ಮೀನುಗಾರಿಕೆಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸರಕಾರ

(ನ್ಯೂಸ್ ಕಡಬ) newskadaba.com ಕಡಬ, ಮೇ.27. ಮಂಗಳೂರು:  ಮುಂಗಾರು ಅವಧಿಯಲ್ಲಿ ಆಳ ಸಮುದ್ರ ಯಾಂತ್ರೀಕೃತ ಮೀನುಗಾರಿಕೆ ನಿಷೇಧದ ಅವಧಿಯನ್ನು ಕೇಂದ್ರ ಸರಕಾರದ ಆದೇಶದ ಮೇರೆಗೆ  ಜೂನ್ 14ರ ವರೆಗೆ ಮುಂದೂಡಲಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಅವರು ಟ್ವೀಟ್ ಮಾಡಿದ್ದಾರೆ.

ಮೀನುಗಾರಿಕಾ ಇಲಾಖೆ ಋತುವಿನಂತೆ ಪಶ್ಚಿಮ ಕರಾವಳಿಯಲ್ಲಿ ಮೇ 31 ಆ ವರ್ಷದ ಮೀನುಗಾರಿಕೆಗೆ ಕೊನೆಯ ದಿನ.  ಆ ಬಳಿಕ 61 ದಿನಗಳ ಕಾಲ ನಿಷೇಧ ಇರುತ್ತಿತ್ತು. ಆದರೆ ಈ ವರ್ಷ ಲಾಕ್ಡೌನ್ ಕಾರಣದಿಂದ ಮೀನುಗಾರರು ಅಪಾರ ನಷ್ಟ ಅನುಭವಿಸಿದ್ದರು. ಈ ಕಾರಣಕ್ಕಾಗಿ ನಿಷೇಧ ಅವಧಿಯನ್ನು ಜೂ. 14ರ ವರೆಗೆ ಮುಂದೂಡಲಾಗಿದೆ.

Also Read  ಮಲೆನಾಡು ಗಿಡ್ಡ ತಳಿ ರಾಸುಗಳ ಸಂರಕ್ಷಣೆ ► ಕೊೖಲದಲ್ಲಿ ಗೋಕುಲ ಗ್ರಾಮ ಅನುಷ್ಠಾನಕ್ಕೆ ಮುನ್ನುಡಿ

ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ ಪಾರ್ಶ್ವನಾಥ ಅವರು ಪ್ರತಿಕ್ರಿಯಿಸಿ ‘ಮೀನುಗಾರಿಕಾ ಅವಧಿ ಮುಂದೂಡಿ ಕೇಂದ್ರ ಸರಕಾರ ಆದೇಶ ಮಾಡಿದ್ದು, ರಾಜ್ಯ ಸರಕಾರದ ಆದೇಶ ಇನ್ನಷ್ಟೇ ಬರಬೇಕಿದೆ. ನಂತರ  ಈ ನಿಯಮ ಅನ್ವಯವಾಗಲಿದೆ’ ಎಂದು ತಿಳಿಸಿದ್ದಾರೆ.

ಇತ್ತೀಚೆಗೆಯಷ್ಟೇ ದ.ಕ. ಜಿಲ್ಲೆಯಲ್ಲಿ ನಾಡದೋಣಿ ಮತ್ತು ಸಣ್ಣ ಯಾಂತ್ರೀಕೃತ ಬೋಟ್ ಮೀನುಗಾರಿಕೆಗೆ ಅವಕಾಶ ನೀಡಲಾಗಿತ್ತು. ಇದೀಗ  ಆಳ ಸಮುದ್ರ ಮೀನುಗಾರಿಕೆಗೆ ಮತ್ತಷ್ಟು ದಿನ ಅವಕಾಶ ಸಿಗುವ ನಿರೀಕ್ಷೆ ಇದೆ.

error: Content is protected !!
Scroll to Top