(ನ್ಯೂಸ್ ಕಡಬ) newskadaba.com ವಾಷಿಂಗ್ಟನ್,ಮೇ.27., ಡೆಡ್ಲಿ ಕೊರೋನಾ ವೈರಸ್ ದಾಳಿಗೆ ಇಡೀ ವಿಶ್ವವೇ ನಲುಗಿ ಹೋಗಿದೆ, ಸುಮಾರು 250ಕ್ಕೂ ಹೆಚ್ಚು ರಾಷ್ಟ್ರಗಳು ಕೊರೋನಾ ಮಹಾಮಾರಿಯ ವಜ್ರಮುಷ್ಟಿಯಲ್ಲಿ ನಲುಗುತ್ತಿವೆ. ವಿಶ್ವದಾದ್ಯಂತ ಈ ವರೆಗೆ 3.43 ಲಕ್ಷ ಜನರು ವೈರಸ್’ಗೆ ಬಲಿಯಾಗಿದ್ದು, ಸೋಂಕಿತರ ಸಂಖ್ಯೆ 55 ಲಕ್ಷ ಗಡಿಯತ್ತ ಸಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ ವಿಶ್ವದಾದ್ಯಂತ 99,780ಕ್ಕೂ ಹೆಚ್ಚು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಪ್ರತೀನಿತ್ಯ ಪಾಸಿಟಿವ್ ಪ್ರಕರಣಗಳು ಶರವೇಗದಲ್ಲಿ ಸಾಗುತ್ತಲೇ ಇದೆ.
ಪ್ರಸ್ತುತ ಇಡೀ ವಿಶ್ವದಲ್ಲಿ ಸೋಂಕಿತರ ಸಂಖ್ಯೆ 5,404,512ಕ್ಕೆ ಏರಿಕೆಯಾಗಿದ್ದು, ಸಾವನ್ನಪ್ಪಿದ್ದವರ ಸಂಖ್ಯೆ 343,514ಕ್ಕೆ ತಲುಪಿದೆ.
ಅಮೆರಿಕಾ ದೇಶದಲ್ಲಿಯೇ 143,739 ಮಹಾಮಾರಿ ವೈರಸ್’ಗೆ ಬಲಿಯಾಗಿದ್ದು, 2,454,452 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ, ವಿಶ್ವದಲ್ಲೆ ಅತಿ ಹೆಚ್ಚು ಸಾವಿನ ಸಂಖ್ಯೆ ಅಮೆರಿಕಾ ದೇಶದಲ್ಲಿ ಆಗಿದೆ ಎಂದು ವರದಿಗಳಿಂದ ತಿಳಿದುಬಂದಿದೆ.