ಇಂಟರ್ನೆಟ್ ನೋ ಕನೆಕ್ಟ್ ಹಳ್ಳಿಜನರ ಗೋಳು

(ನ್ಯೂಸ್ ಕಡಬ) newskadaba.com ಕಡಬ, ಮೇ.25.ಬೆಳ್ತಂಗಡಿ:  ನಗರಗಳಲ್ಲಿರುವ ಜನರು 5ಜಿಯತ್ತ ಮುಖಮಾಡಿದರೆ ಹಳ್ಳಿಗಳಲ್ಲಿ ಮಾತ್ರ ಇಂಟರ್ನೆಟ್ ಸಂಪರ್ಕ ಇನ್ನೂ ಸಮಸ್ಯೆಯಾಗಿಯೇ ಉಳಿದಿದೆ. ಸ್ಥಿರ ದೂರವಾಣಿ ಸಂಪರ್ಕ ಕಲ್ಪಿಸಿದ ಬಳಿಕ ಮೊಬೈಲ್ ಇಂಟರ್ನೆಟ್ ಯುಗಕ್ಕೆ ಬಂದರೂ ಅದು ನಗರಕ್ಕೆ ಮಾತ್ರ ಸೀಮಿತವಾಗಿದೆ.

ಹಳ್ಳಿಗಳಲ್ಲಿ ಸ್ಥಿರ ದೂರವಾಣಿ ಮೂಲಕ ಬ್ರಾಡ್ಬ್ಯಾಂಡ್, ಮೊಬೈಲ್ ಇಂಟರ್ನೆಟ್ ಸಂಪರ್ಕಗಳಿವೆ. ಆದರೆ ಇವುಗಳಲ್ಲಿ ಸಂಪರ್ಕ ಸಮಸ್ಯೆ, ವೇಗದ ಸಮಸ್ಯೆ ಇನ್ನೂ ಕೊನೆಗೊಂಡಿಲ್ಲ. ಡೋಂಗಲ್ಗಳೂ ಇದ್ದರೂ ಬರಿ ಹೆಸರಿಗಷ್ಟೆ ಸಿಮಿತವಾಗಿದೆ. ಮುಂಡಾಜೆ, ಕಕ್ಕಿಂಜೆ, ದಿಡುಪೆ, ನೆರಿಯ, ಚಾರ್ಮಾಡಿ, ಕಡಿರುದ್ಯಾವರ, ಮೊದಲಾದ ಪ್ರದೇಶಗಳಲ್ಲಿ, ಟವರ್ಗಳಿದ್ದರೂ ಇಂಟರ್ನೆಟ್ ಸಂಪರ್ಕ ಲಭ್ಯತೆ ಇಲ್ಲ.

Also Read  ಭಾರತದಲ್ಲಿ ಇಳಿದ ಕೊರೋನಾ ಪ್ರಕರಣ

ಬಿಎಸ್ಎನ್ಎಲ್ ಸಂಪರ್ಕ ಕಳೆದ 3 ತಿಂಗಳಿಂದ ನೆರಿಯ, ಕಕ್ಕಿಂಜೆ, ಮುಂಡಾಜೆ ದೂರವಾಣಿ ವಿನಿಮಯ ಕೇಂದ್ರಗಳಲ್ಲಿ ಸರಿಯಾದ ನಿರ್ವಹಣೆಯಾಗುತ್ತಿಲಾ.್ಲ ಇದರಿಂದ ಬ್ರಾಡ್ಬ್ಯಾಂಡ್ ಸಂಪರ್ಕವನ್ನಂತೂ ಕೇಳುವವರೇ ಇಲ್ಲ ಎನ್ನುವಂತಾಗಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ದೂರವಾಣಿ ಉಪ ಕೇಂದ್ರಗಳಲ್ಲಿ ಪ್ರಸ್ತುತ 33ಮಂದಿ ಮಾತ್ರ ಸೇವೆಗೆ ಲಭ್ಯ ಇದ್ದಾರೆ. ಇಷ್ಟೊಂದು ಕಡಿಮೆ ಸಂಖ್ಯೆಯ ಸಿಬಂದಿಯಿಂದ ಸೇವೆ ಅಸಾಧ್ಯವಾಗಿದೆ. ಜತೆಗೆ ಸಂಬಳವೂ ಇಲ್ಲದೆ ನೌಕರರೂ ಸಮಸ್ಯೆ ಎದುರಿಸುವಂತಾಗಿದೆ.

ಕೋವಿಡ್-19 ಕಾರಣ ಊರು ಸೇರಿ ವರ್ಕ್ಫ್ರಮ್ ಹೋಂ, ಆನ್ಲೈನ್ ತರಗತಿ ಇತ್ಯಾದಿಗಳಲ್ಲಿರುವ ಹಳ್ಳಿ ಭಾಗದವರಿಗೆ ಇಂಟರ್ ನೆಟ್ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಬ್ಯಾಂಕ್, ಪಂಚಾಯತ್ಗಳಲ್ಲೂ ಸಮಸ್ಯೆ ಎದುರಾಗಿದೆ.

Also Read  ಬಂಟ್ವಾಳ: ಬಿಜೆಪಿ ನವ ಕರ್ನಾಟಕ ಪರಿವರ್ತನಾ ಯಾತ್ರೆ ► ಸರಕಾರ ಮುಸ್ಲಿಮರ ಸುನ್ನತನ್ನು ನಿಷೇಧಿಸಲಿ - ಕೆ.ಎಸ್.ಈಶ್ವರಪ್ಪ ► ರಮಾನಾಥ ರೈಗೆ ತಾಕತ್ತಿದ್ದರೆ ಕಲ್ಲಡ್ಕ ಭಟ್ ರನ್ನು ಬಂಧಿಸಲಿ - ಶೋಭಾ ಕರಂದ್ಲಾಜೆ

error: Content is protected !!
Scroll to Top