(ನ್ಯೂಸ್ ಕಡಬ) newskadaba.com ಮುಂಬೈ, ಮೇ.26., ಮಾರಕ ಕೊರೋನಾ ವೈರಸ್ ಗೆ ಮಹಾರಾಷ್ಟ್ರ ತತ್ತರಿಸಿ ಹೋಗಿದ್ದು, ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ ಬರೊಬ್ಬರಿ 60 ಮಂದಿ ಕೊರೋನಾ ಬಲಿ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ.
ದೇಶದಲ್ಲಿನ ಕೊರೋನಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ರಾಜ್ಯವೊಂದರಲ್ಲಿ ಒಂದೇ ದಿನ ಇಷ್ಟು ಪ್ರಮಾಣದ ಸಾವು ಸಂಭವಿಸಿದೆ. ನಿನ್ನೆ ದೇಶಾದ್ಯಂತ 146 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ದೇಶದಲ್ಲಿ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 4,167ಕ್ಕೆ ಏರಿಕೆಯಾಗಿದೆ.
ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 1,695ಕ್ಕೆ ಏರಿಕೆಯಾಗಿದೆ. ಇನ್ನು 2ನೇ ಸ್ಥಾನದಲ್ಲಿ ಗುಜರಾತ್ ಇದ್ದು, ಇಲ್ಲಿ 888 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಮಧ್ಯ ಪ್ರದೇಶದಲ್ಲಿ 300, ಬಂಗಾಳದಲ್ಲಿ 278, ದೆಹಲಿಯಲ್ಲಿ 276, ರಾಜಸ್ಥಾನದಲ್ಲಿ 167, ಉತ್ತರ ಪ್ರದೇಶದಲ್ಲಿ 165, ತಮಿಳುನಾಡಿನಲ್ಲಿ 118 ಮತ್ತು ಅಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ ತಲಾ 56ಕ್ಕೆ ಏರಿಕೆಯಾಗಿದೆ.
ಕರ್ನಾಟಕದಲ್ಲಿ ಈ ಸಂಖ್ಯೆ 44ಕ್ಕೆ ಏರಿಕೆಯಾಗಿದ್ದು, ಪಂಜಾಬ್ ನಲ್ಲಿ 40, ಜಮ್ಮು ಮತ್ತು ಕಾಶ್ಮೀರದಲ್ಲಿ 23, ಹರ್ಯಾಣದಲ್ಲಿ 16, ಬಿಹಾರದಲ್ಲಿ 13, ಒಡಿಶಾದಲ್ಲಿ 7 ಕೇರಳ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ 5, ಜಾರ್ಖಂಡ್ ಮತ್ತು ಅಸ್ಸಾಂನಲ್ಲಿ ತಲಾ 4, ಚಂಡೀಘಡಸ ಉತ್ತರಾಖಂಡದಲ್ಲಿ 3, ಮೇಘಾಲಯದಲ್ಲಿ 1 ಸಾವು ಸಂಭವಿಸಿದೆ.
ನಿನ್ನೆ ದೇಶದಲ್ಲಿ ಸಂಭವಿಸಿದ 146 ಕೋರೋನಾ ಸೋಂಕಿತರ ಸಾವಿನ ಪೈಕಿ, ಗುಜರಾತ್ ನಲ್ಲಿ 30, ದೆಹಲಿಯಲ್ಲಿ 15, ಮಧ್ಯ ಪ್ರದೇಶದಲ್ಲಿ 10, ತಮಿಳುನಾಡಿನಲ್ಲಿ 7, ಬಂಗಾಳದಲ್ಲಿ 6, ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ತಲಾ 4 ತೆಲಂಗಾಣದಲ್ಲಿ ಮೂರು, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಕರ್ನಾಟಕದಲ್ಲಿ ತಲಾ 2 ಮತ್ತು ಕೇರಳದಲ್ಲಿ 1 ಸೋಂಕಿತರು ಸಾವನ್ನಪ್ಪಿದ್ದಾರೆ.
ಅಂತೆಯೇ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 80,722ಕ್ಕೆ ಏರಿಕೆಯಾಗಿದೆ. ಇನ್ನು ನಿನ್ನೆ ಒಂದೇ ದಿನ ದೇಶಾದ್ಯಂತ 6,535 ಹೊಸ ಪಾಸಿಟಿವ್ ಪ್ರಕರಣಗಳು ದಢವಾಗಿದ್ದು, ಆ ಮೂಲಕ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1,45,380ಕ್ಕೆ ಏರಿಕೆಯಾಗಿದೆ.