ಮಹಾಮಾರಿ ಕೊರೊನಾಗೆ ಪಡುಬಿದ್ರಿ ವ್ಯಕ್ತಿ ಬಲಿ ➤ ಅಬುಧಾಬಿಯಲ್ಲಿ ಅಂತ್ಯಕ್ರಿಯೆ

(ನ್ಯೂಸ್ ಕಡಬ) newskadaba.com ಪಡುಬಿದ್ರಿ, ಮೇ.26.,  ಕಳೆದ 8 ವರ್ಷಗಳಿಂದ ಅಬುಧಾಬಿಯಲ್ಲಿ ಉದ್ಯೋಗ ಮಾಡಿಕೊಂಡಿದ್ದ ಹೆಜಮಾಡಿಯ 44ರ ಹರೆಯದ ವ್ಯಕ್ತಿಯೊಬ್ಬರಿಗೆ‍‍ ಕೋವಿಡ್ ಕಾಯಿಲೆ ಉಲ್ಬಣಿಸಿ ಭಾನುವಾರ ಮೃತಪಟ್ಟಿದ್ದಾರೆ. ಹೆಜಮಾಡಿ ಬ್ರಹ್ಮಸ್ಥಾನ ಬಳಿಯ ಇವರು ಅಬುಧಾಬಿಯಲ್ಲಿ ಉದ್ಯೋಗದಲ್ಲಿದ್ದರು. ವಿಶ್ವದಾದ್ಯಂತ ಕೋವಿಡ್ ಉಲ್ಬಣಿಸಿದ ಪರಿಣಾಮವಾಗಿ ಅವರು ಊರಿಗೆ ಬರಲಾಗಲಿಲ್ಲ. ಉದ್ಯೋಗ ಮಾಡಿಕೊಂಡ ಸ್ಥಳದಲ್ಲಿ ಎರಡು ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದ ಸಂದರ್ಭ ನೆಗೆಟಿವ್‌ ಬಂದಿತ್ತು. ಮೂರನೇ ಬಾರಿಯ ಪರೀಕ್ಷೆ ವೇಳೆ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಸರಕಾರಿ ಸ್ವಾಮ್ಯದ ಶೇಖ್‌ ಖಲೀಫಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Also Read  ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್ ಕುಟುಂಬ ರಾಘವೇಂದ್ರ ಮಠಕ್ಕೆ ಭೇಟಿ

ಮೃತರ ಪತ್ನಿ ಹಾಗೂ ಪುತ್ರಿ ಪುಣೆದಲ್ಲಿದ್ದಾರೆ. ಅಲ್ಲಿಂದ ಶವ ತರಲು ಅಸಾಧ್ಯವಾಗಿದ್ದು, ಮಂಗಳವಾರ ಅಬುಧಾಬಿಯಲ್ಲೇ ಗೆಳೆಯರು ಮತ್ತು ಸಹೋದ್ಯೋಗಿಗಳ ಸಮ್ಮುಖ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

error: Content is protected !!
Scroll to Top