ಪುತ್ತೂರಿನ ಎಂಟು ಕೋರೊನಾ ವಾರಿಯರ್ಸ್ ಹೋಂಕ್ವಾರಂಟೈನ್ಗೆ

(ನ್ಯೂಸ್ ಕಡಬ) newskadaba.com ಕಡಬ, ಮೇ.26: ಪುತ್ತೂರು ನಗರ ಸಂಚಾರ, ಮಹಿಳಾ ಪೊಲೀಸ್‌ ಠಾಣೆಯ  ನಾಲ್ವರು ಸಿಬ್ಬಂದಿಗಳು ಜ್ವರದಿಂದಾಗಿ ಹೋಂಕ್ವಾರಂಟೈನ್‌ಗೆ  ತೆರಳಿದ್ದಾರೆ

ಠಾಣಾ ವ್ಯಾಪ್ತಿಗೆ ಸಂಬಂಧಪಟ್ಟಂತೆ ಹೊರರಾಜ್ಯದಿಂದ ಬಂದು ವಸತಿ ನಿಲಯಗಳಲ್ಲಿ ಹೋಂಕ್ವಾರಂಟೈನ್‌ ಆಗಿರುವ ಹಾಗೂ ಮನೆಯಲ್ಲಿ ಹೋಂಕ್ವಾರಂಟೈನ್‌ನಲ್ಲಿರುವವರ ಮಾಹಿತಿ ಪಡೆಯುವ ಕಾರ್ಯ ನಡೆಸಿದ ಹಾಗೂ ಗುಂಡ್ಯ ಮತ್ತು ಸಂಪಾಜೆ ಸೇರಿದಂತೆ ಬೇರೆ ಬೇರೆ ಗಡಿ ಭಾಗದ ಚೆಕ್‌ಪೋಸ್ಟ್‌ನಲ್ಲಿ ಕಾರ್ಯನಿರ್ವಹಿಸಿದ್ದರು. ಪೊಲೀಸ್‌ ಸಿಬ್ಬಂದಿಗಳಿಗೆ ಇಲಾಖೆಯ ನಿರ್ದೇಶನದಂತೆ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಈ ನಡುವೆ ಕೆಲವರಿಗೆ ಗಂಟಲು ನೋವು, ಶೀತ, ಜ್ವರ ಬಾಧೆಯಿಂದಾಗಿ ಅವರು ಹೋಂಕ್ವಾರಂಟೈನ್‌ನಲ್ಲಿರಬೇಕಾಗಿದೆ.

ಮಹಿಳಾ ಪೊಲೀಸ್‌ ಠಾಣೆಯಲ್ಲೂ ಜ್ವರ, ಶೀತ ಬಾಧೆಗೆ ಸಂಬಂಧಪಟ್ಟಂತೆ ಇಬ್ಬರು ಮಹಿಳಾ ಪೊಲೀಸರು ಹಾಗೂ ಸಂಚಾರ ಪೊಲೀಸ್‌ ಠಾಣೆಯಲ್ಲಿ ಚೆಕ್‌ಪೋಸ್ಟ್‌ನಲ್ಲಿ ಕರ್ತವ್ಯ ಮಾಡುತ್ತಿದ್ದ ಒಬ್ಬ ಮತ್ತು ಮಡಿಕೇರಿಯ ಸೋಂಕಿತನ ಸಂಪರ್ಕ ಹೊಂದಿದ್ದ ವಿಚಾರಕ್ಕೆ ಓರ್ವ ಸೇರಿದಂತೆ ಪುತ್ತೂರು ಠಾಣೆಯಲ್ಲಿ ಒಟ್ಟು 8 ಮಂದಿ ಪೊಲೀಸರು ಹೋಂಕ್ವಾರಂಟೈನ್‌ಗೆತೆರಳಿದ್ದಾರೆ.

Also Read  ಬೆಳ್ತಂಗಡಿ: ಶಾಲಾ ಬಸ್ ಢಿಕ್ಕಿ - ಪಾದಚಾರಿ ಮೃತ್ಯು

ಈ ಕಾರಣದಿಂದ ಪುತ್ತೂರು ನಗರ ಪೊಲೀಸ್‌ ಠಾಣೆಯ ಮೂವರು ಸಿಬ್ಬಂಗಳು ಸೇರಿ ವಿಟ್ಲ ಪೊಲೀಸ್‌ ವಸತಿ ನಿಲಯದಿಂದ ಪುತ್ತೂರು ಠಾಣೆಗೆ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಪೊಲೀಸ್‌ ಸಿಬ್ಬಂದಿಗೂ 14 ದಿನಗಳ ಹೋಂಕ್ವಾರಂಟೈನ್‌ ಮಾಡಲಾಗಿದೆ.

 

error: Content is protected !!
Scroll to Top