ಗಂಡಿಬಾಗಿಲು: ಶಾಲಾ ದುರಸ್ಥಿ ಕಾಮಗಾರಿಗೆ ರೂ. 3.50 ಲಕ್ಷ ಮಂಜೂರು

(ನ್ಯೂಸ್ ಕಡಬ) newskadaba.com ಕಡಬ, ಮೇ.25. ಕೊಯಿಲ ಗ್ರಾಮದ ಗಂಡಿಬಾಗಿಲು ಸರ್ಕಾರಿ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆಯ ಅಭಿವೃದ್ಧಿ ಕಾಮಗಾರಿಗೆ 3 ಲಕ್ಷದ 50 ಸಾವಿರ ರೂಪಾಯಿ ಮಂಜೂರು ಆಗಿದೆ ಎಂದು ನೆಲ್ಯಾಡಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ ಸರ್ವೋತ್ತಮ ಗೌಡ ತಿಳಿಸಿದ್ದಾರೆ.

ಶಾಲೆಯ ಕಟ್ಟಡದ ಮಾಡು ಸಂಪೂರ್ಣವಾಗಿ ಹಳೆಯದಾಗಿ, ನಾದುರಸ್ಥಿಯಲ್ಲಿತ್ತು.ಮಳೆಗಾಲದಲ್ಲಿ ತೀರಾ ಅಪಾಯ ಕಾಡುವಂತಿತ್ತು, ಅದರ ಸಲುವಾಗಿ ದ.ಕ. ಜಿಲ್ಲಾ ಪಂಚಾಯಿತಿ ಮತ್ತು ಜಿಲ್ಲಾಧಿಕಾರಿ ಮಳೆಹಾನಿ ನಿಧಿಯಿಂದ ಕಟ್ಟಡದ ಮಾಡು ರಿಪೇರಿಗೆ 2 ಲಕ್ಷ ರೂಪಾಯಿ ಮತ್ತು ಜಿಲ್ಲಾ ಪಂಚಾಯಿತಿ ಕಟ್ಟಡ ಸೇರ್ಪಡೆ ಮಾರ್ಪಾಡು ನಿಧಿಯಿಂದ ಶಾಲಾ ಕಚೇರಿ ನೆಲಕ್ಕೆ ಟೈಲ್ಸ್ ಹಾಸುವುದಕ್ಕಾಗಿ 1.50 ಲಕ್ಷ ಸೇರಿದಂತೆ ಒಟ್ಟು 3.50 ಲಕ್ಷ ರೂಪಾಯಿ ಮಂಜೂರು ಆಗಿರುವುದಾಗಿ ತಿಳಿಸಿದ್ದಾರೆ.

Also Read  ಕಡಬ: ಕರ್ನಾಟಕ ರಾಜ್ಯ ಮಲಯಾಳಿ ಕ್ರಿಶ್ಚಿಯನ್ ಅಸೋಸಿಯೇಷನ್ ಇದರ ನೂತನ ಪದಾಧಿಕಾರಿಗಳ ಆಯ್ಕೆ ಅಧ್ಯಕ್ಷರಾಗಿ ಕ್ಸೇವಿಯರ್ ಬೇಬಿ, ಕಾರ್ಯದರ್ಶಿಯಾಗಿ ಜೋಮನ್ ಎಂ.ಜೆ ಆಯ್ಕೆ

 ಶಾಲೆಯ ಮಾಡು ರಿಪೇರಿ ಕಾಮಗಾರಿ ಪ್ರಗತಿಯಲ್ಲಿದ್ದು, ಟೈಲ್ಸ್ ಹಾಸುವ ಕಾಮಗಾರಿ ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

error: Content is protected !!
Scroll to Top