ಕೊರೊನಾಗೆ ತತ್ತರಿಸಿದ ಕೃಷ್ಣನಗರಿ: ಉಡುಪಿಯಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 93 ಕ್ಕೆ ಏರಿಕೆ

(ನ್ಯೂಸ್ ಕಡಬ) newskadaba.com ಕಡಬ, ಮೇ.25.  :  ಉಡುಪಿ ಜಿಲ್ಲೆಯಲ್ಲಿ ಸೋಮವಾರ 16 ಕೊರೊನಾ ಪ್ರಕರಣ ದಾಖಲಾಗಿದ್ದು, 16 ಪ್ರಕರಣಗಳ ಪೈಕಿ 14 ಹೊರರಾಜ್ಯದ ಸಂಪರ್ಕ ಹಾಗೂ ಇಬ್ಬರಿಗೆ ಹೊರ ದೇಶದ ಸಂಪರ್ಕದಿಂದ ಸೋಂಕು ಹರಡಿದೆ.

 

ಮಹಾರಾಷ್ಟ್ರ ರಾಜ್ಯದಿಂದ ಬಂದ 8 ಮಕ್ಕಳು, 4 ಮಹಿಳೆಯರಲ್ಲಿ ಹಾಗೂ  2 ಮಂದಿ ಗಂಡಸರಲ್ಲಿ ಸೋಂಕು ದೃಢವಾಗಿದೆ.

ಇನ್ನು ದುಬೈನಿಂದ ಹಿಂತಿರುಗಿದ ಇಬ್ಬರು ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ. ಇಂದಿನ ಪ್ರಕರಣ ಸೇರಿ ಉಡುಪಿ ಜಿಲ್ಲೆಯಲ್ಲಿ ಓಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 93 ಕ್ಕೆ ಏರಿಕೆಯಾಗಿದೆ.

Also Read  ಇಂದು ಏಕ್ ಭಾರತ್ ಶೇಷ್ಠ್ ಭಾರತ್ ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 69 ಕ್ಕೆ ಏರಿಕೆಯಾಗಿದೆ.

error: Content is protected !!
Scroll to Top