(ನ್ಯೂಸ್ ಕಡಬ) newskadaba.com ಕಡಬ, ಮೇ.25. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಎಂಡೋಪಿಡಿತೆಗೆ ವೀಲ್ಹ್ ಚಯರ್ ಬುಧವಾರ ವಿತರಿಸಲಾಯಿತು.

ನೂಜಿಬಾಳ್ತಿಲ ಗ್ರಾಮದ ಕಾಡುಮನೆ ವಿಜಯ ಅವರ ಪುತ್ರಿ ಎಂಡೋಪಿಡಿತೆ ಯಕ್ಷಿತಾ ಅವರಿಗೆ ಯೋಜನೆ ವತಿಯಿಂದ ಕೊಡಮಾಡಲಾದ ವೀಲ್ಹ್ ಚಯರ್ ನ್ನು ಧರ್ಮಸ್ಥಳ ಯೋಜನೆಯ ದ.ಕ. ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಅವರು ಫಲಾನುಭವಿ ಮನೆಗೆ ಬೇಟಿ ನೀಡಿ ವಿತರಿಸಿದರು. ಇದೇ ಸಂದರ್ಭದಲ್ಲಿ ಯೋಜನೆಯ ಬಿಳಿನೆಲೆ ವಲಯ ವ್ಯಾಪ್ತಿಯ ಸಂಘದ ಸದಸ್ಯರ ಮನೆಗೂ ಬೇಟಿ ಮಾಡಿ ಸಾಲ ವಿನಿಯೋಗದ ಬಗ್ಗೆ ಪರಿಶೀಲನೆ ನಡೆಸಲಾಯಿತು. ಪುತ್ತೂರು ತಾಲೂಕು ಯೋಜನಾಧಿಕಾರಿ ಜನಾರ್ಧನ ಎಸ್., ವಲಯ ಮೇಲ್ವಿಚಾರಕ ಧರ್ಣಪ್ಪ ಗೌಡ, ವಲಯದ ಮಾಜಿ ವಲಯಾಧ್ಯಕ್ಷ ಭವಾನಿ ಶಂಕರ, ಸೇವಾಪ್ರತಿನಿಧಿ ದಯಾನಂದ ಉಪಸ್ಥಿತರಿದ್ದರು.









