ಆಣೆ ಪ್ರಮಾಣ ಮಾಡಿ ದತ್ತು ಪಡೆದ ಬಾಲಕನಿಗೆ ► ಬಿಎಸ್‍ವೈ ಕೈ ಕೊಟ್ಟರೇ ..???

(ನ್ಯೂಸ್ ಕಡಬ) newskadaba.com ಬೆಂಗಳೂರು,ಸೆ.01,  7 ವರ್ಷಗಳ ಹಿಂದೆ ಸಿಎಂ ಆಗಿದ್ದ ಕಾಲದಲ್ಲಿ ಬಾಲಕನೊಬ್ಬನನ್ನು ದತ್ತು ಪಡೆದು ಕೊನೆವರೆಗೂ ವಿದ್ಯಾಭ್ಯಾಸ ಕೊಡಿಸುವುದಾಗಿ ಮಾತು ಕೊಟ್ಟಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರವರು ಇದೀಗ ದತ್ತು ಬಾಲಕನ ಕೈ ಬಿಟ್ಟಿದ್ದಾರೆ.

ಯಾದಗಿರಿ ಮೂಲದ ಬಸವರಾಜು ಮತ್ತು ಶಿವಮ್ಮ ದಂಪತಿಯ 10 ವರ್ಷದ ಮಗನನಾದ ವಿಶ್ವನಾಥ್ ನನ್ನು ಬಿಎಸ್‍ವೈ ದತ್ತು ಪಡೆದು ಬಾಲಕನ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡ್ತೀನಿ ಅಂತಾ ದೇವರ ಮುಂದೆ ಆಣೆ ಪ್ರಮಾಣ ಕೂಡ ಮಾಡಿದ್ದರು.

ಆ ಬಳಿಕ ತಮ್ಮ ಆಪ್ತ ಸಿದ್ದಲಿಂಗಸ್ವಾಮಿಗೆ ಹೇಳಿ ಮೈಸೂರಿನ ಜೆಎಸ್‍ಎಸ್ ವಿದ್ಯಾಪೀಠದಲ್ಲಿ ಐದನೇ ತರಗತಿಯಿಂದ 9ನೇ ತರಗತಿವರೆಗೂ ಓದಿಸಿದ್ದಾರೆ. ಆದರೆ 10ನೇ ತರಗತಿಗೆ ಬಂದಾಗ ಪರೀಕ್ಷೆ ಶುಲ್ಕ ಕಟ್ಟದೇ ಬೇಜವಾಬ್ದಾರಿ ತೋರಿಸಿದ್ದಾರೆ. ಹಾಗೋ ಹೀಗೂ ಕಷ್ಟಪಟ್ಟು ವಿಶ್ವನಾಥ್ ಎಸ್‍ಎಸ್‍ಎಲ್‍ಸಿ ಪಾಸ್ ಮಾಡಿಕೊಂಡಿದ್ದಾನೆ. ನಂತರ ಪಿಯುಸಿ ಓದಬೇಕು ಸಹಾಯ ಮಾಡಿ ಅಂತಾ ಬಿಎಸ್‍ವೈ ಆಪ್ತರಾದ ಸಿದ್ದಲಿಂಗಸ್ವಾಮಿರವರ ಮನೆ ಬಾಗಿಲಿಗೆ ಹೋದ್ರೆ ನನ್ನ ಹತ್ರ ಬರಬೇಡಿ ಅಂತಾ ಬೈದು ಕಳಿಸಿದ್ದಾರಂತೆ.

Also Read  ಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ

ಇಷ್ಟೆಲ್ಲಾ ಆದ್ಮೇಲೆ ಬಾಲಕನ ಪೋಷಕರು ಬಿಎಸ್‍ವೈ ಅವರ ಡಾಲರ್ಸ್ ಕಾಲೋನಿ ನಿವಾಸಕ್ಕೆ ಹೋಗಿದ್ದಾರೆ. ಆದರೆ ಬಿಎಸ್‍ವೈ ಬೆಂಬಲಿಗರು ಭೇಟಿ ಮಾಡಲು ಅವಕಾಶ ಕೊಡದೇ ವಾಪಸ್ ಕಳಿಸಿದ್ದಾರೆ.

 

error: Content is protected !!
Scroll to Top