(ನ್ಯೂಸ್ ಕಡಬ) newskadaba.com ನೆಲ್ಯಾಡಿ,ಸೆ.01, ಇಲ್ಲಿನ ಸಮೀಪದ ಉಳಿತೊಟ್ಟು ಬಿಲಾಲ್ ಜುಮಾ ಮಸೀದಿಯಲ್ಲಿ ತ್ಯಾಗ ಬಲಿದಾನದ ಸಂಕೇತವಾದ ಈದುಲ್ ಅಝ್ಹಾಃ ( ಬಕ್ರೀದ್) ಶುಕ್ರವಾರ ಆಚರಿಸಲಾಯಿತು.
ಮಸೀದಿಯ ಖತೀಬ್ ಅಬೂಬಕರ್ ಸಿದ್ದೀಕ್ ಸಖಾಫಿ ಮಾಡಾವು ಈದ್ ನಮಾಝ್ ಗೆ ನೇತೃತ್ವ ನೀಡಿ ಈದ್ ಸಂದೇಶ ನೀಡಿದರು. ಈದ್ ಆಚರಣೆಯಲ್ಲಿ ಸೇರಿದ ಮಸೀದಿಯ ನೂರಾರು ಜಮಾಅತರು ಸಹೋದರತೆಯ ಸಂಕೇತವಾಗಿ ಪರಸ್ಪರ ಆಲಂಗಿಸಿ ಈದ್ ಆಚರಿಸಿದರು.