ಮಗಳೆಂದರೆ ಅಪ್ಪನಿಗೆ ಪಂಚಪ್ರಾಣ ► ಮಗಳನ್ನು ಕೊಂದು ಆತ್ಮಹತ್ಯೆಗೆ ಶರಣಾದ ತಂದೆ..!!!

(ನ್ಯೂಸ್ ಕಡಬ) newskadaba.com ಉಡುಪಿ, ಆ.31, ಜನ್ಮ ನೀಡಿದ ತಂದೆಯೇ ತನ್ನ ಮಗಳನ್ನು ಬಾವಿಗೆ ತಳ್ಳಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯ ಕೊಡವೂರು ಎಂಬಲ್ಲಿ ಗುರುವಾರ ಬೆಳಕಿಗೆ ಬಂದಿದೆ.

ಮಲ್ಪೆಯ ಕೊಡವೂರು ನಿವಾಸಿಯಾದ ಶರತ್ ತನ್ನ 8 ವರ್ಷದ ಮಗಳು ಕನ್ನಿಕಾಳನ್ನು ಮೊದಲು ಬಾವಿಗೆ ತಳ್ಳಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾರೆ  ಎಂದು ಹೇಳಲಾಗಿದೆ.

ಶರತ್ ಮತ್ತು ಮಗಳು ಕನ್ನಿಕಾ ಮಂಗಳವಾರ ರಾತ್ರಿ 12.30ರ ವೇಳೆಯಲ್ಲಿ ಮನೆಯಿಂದ ಕಾಣಿಯಾಗಿದ್ದರು. ಮನೆಯ ಸುತ್ತಮುತ್ತ ಪರಿಸರದಲ್ಲಿ ಹುಡುಕಾಟ ನಡೆಸಿದ ಮನೆಯವರು ಬಳಿಕ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದು ಭಾವಿಸಿ ಸುಮ್ಮನಾಗಿದ್ದರು.

ಬುಧವಾರವೂ ಮನೆಗೆ ಬಾರದೇ ಇದ್ದಾಗ ಸಂಬಂಧಿಕರನ್ನು ವಿಚಾರಿಸಲಾಯಿತು. ಅಲ್ಲೂ ತಂದೆ ಮಗಳು ಕಾಣದೆ ಇದ್ದಾಗ ಮಲ್ಪೆ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಿದ್ದರು. ಆದರೆ ಗುರುವಾರ ಮನೆಯ ತೋಟದಲ್ಲಿದ್ದ ಬಾವಿಯಲ್ಲಿ ಇಬ್ಬರ ಮೃತದೇಹಗಳು ತೇಲುತ್ತಿರುವುದು ಕಂಡುಬಂದಿದೆ. ಮಗಳನ್ನು ಬಾವಿಗೆ ತಳ್ಳಿ ನಂತರ ತಂದೆಯೂ ಹಾರಿರುವ ಶಂಕೆ ವ್ಯಕ್ತವಾಗಿದೆ.

Also Read  ಕಾಸರಗೋಡು: ರೈಲಿನಿಂದ ಎಸೆಯಲ್ಪಟ್ಟು ಯುವಕ ಮೃತ್ಯು

ಮುಂಚೆ ಅದೇ ಬಾವಿ ಸೇರಿದಂತೆ ಎಲ್ಲಾ ಕಡೆ ಹುಟುಕಾಟ ನಡೆಸಲಾಗಿತ್ತು. ಆದರೆ ಬಾವಿಗೆ ಹಾರಿರುವ ಬಗ್ಗೆ ಯಾವುದೇ ಕುರುಹುಗಳು ಇರಲಿಲ್ಲ. ಸದ್ಯ ಶವಗಳನ್ನು ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಶರತ್ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆಗೆ ಸಂಬಂಧಪಟ್ಟ ವೃತ್ತಿಯನ್ನು ಮಾಡಿಕೊಂಡು ಬಂದಿದ್ದರು. ಮಂಗಳವಾರ ರಾತ್ರಿ ಕುಟುಂಬ ಸಮೇತರಾಗಿ ಗಣೇಶ ಉತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮನೆಗೆ ಹಿಂತುರಿಗಿದ್ದರು. ಆದರೆ ಏಕಾಏಕಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕಾರಣಗಳೇ ಇಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಯಾವುದೇ ಜಗಳ-ಕೌಟುಂಬಿಕ ಕಲಹ, ಆರ್ಥಿಕ ಸಮಸ್ಯೆ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ತಂದೆ ಶರತ್ ಮಗಳ ಬಗ್ಗೆ ಬಹಳ ಕಾಳಜಿ ಮಾಡುತ್ತಿದ್ದರು. ಒಂದು ದಿನವೂ ಬಿಟ್ಟು ಇರುತ್ತಿರಲಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಹಾಗಾದ್ರೆ ಆತ್ಮಹತ್ಯೆಗೆ ಕಾರಣ ಏನೆಂಬುದು ನಿಗೂಢವಾಗಿಯೇ ಉಳಿದಿದೆ. ಘಟನೆ ಕುರಿತು ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಇಂದು ಮಳೆ ಕೊಯ್ಲು ಉಚಿತ ಕಾರ್ಯಗಾರ

 

error: Content is protected !!
Scroll to Top