KPCC ಕಾರ್ಯದರ್ಶಿ ವಿಜಯ್ ಮುಳಗುಂದ ಮನೆಗೆ ಐಟಿ ದಾಳಿ ►ಡಿಕೆಶಿ ಆಪ್ತರ ಮೇಲೆ ಮುಂದುವರೆದ ಶೋಧ ಕಾರ್ಯ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.30, ಇಂಧನ ಸಚಿವ ಡಿಕೆ ಶಿವಕುಮಾರ್ ಆಪ್ತರಾಗಿರುವ ವಿಜಯ್ ಮುಳಗುಂದ ರವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಬುಧವಾರ ದಾಳಿ ಮಾಡಿದೆ.

ವಿಜಯ್ ಮುಳಗುಂದ ಅವರು ಕೆಪಿಸಿಸಿ ಕಾರ್ಯದರ್ಶಿಯಾಗಿದ್ದು, ಇವರು ಇಂಧನ ಸಚಿವ ಡಿಕೆ ಶಿವಕುಮಾರ್ ಆಪ್ತರಾಗಿರುತ್ತಾರೆ. ಗುಜರಾತ್’ನ ಕಾಂಗ್ರೆಸ್ ಶಾಸಕರಿಗೆ ಡಿಕೆಶಿ ಆತಿಥ್ಯ  ಜವಾಬ್ದಾರಿಯನ್ನು ನಿಭಾಯಿಸಿದವರಲ್ಲಿ ವಿಜಯ್ ಮುಳಗುಂದ ಕೂಡ ಒಬ್ಬರಾಗಿದ್ದರು. ಎಸ್.ಎಂ. ಕೃಷ್ಣ ಆಡಳಿತದ ಅವಧಿಯಲ್ಲಿ ಕಾವೇರಿ ಹ್ಯಾಂಡ್’ಲೂಮ್ ಅಧ್ಯಕ್ಷರಾಗಿದ್ದರು.

ಒರಾಯನ್ ಮಾಲ್ ಸಮೀಪವಿರುವ ಮುಳಗುಂದ ಅವರ ಮನೆ ಮೇಲೆ ದಾಳಿ ಮಾಡಿರುವ ಐಟಿ ಅಧಿಕಾರಿಗಳು ಮಧ್ಯಾಹ್ನದವರೆಗೂ ಶೋಧ ಕಾರ್ಯವನ್ನು ಮುಂದುವರಿಸುವ ಸಾಧ್ಯತೆ ಇದೆ.

Also Read  ಕೇರಳ ಮೂಲದ ವಿದ್ಯಾರ್ಥಿಗಳನ್ನು ಅಕ್ರಮವಾಗಿರಿಸಿ ಗಡ್ಡ ಬೋಳಿಸಿ ಹಣಕ್ಕೆ ಬೇಡಿಕೆ ಆರೋಪ ➤ ಒಂಬತ್ತು ಮಂದಿ ಆರೋಪಿಗಳ ಬಂಧನ

ಇತ್ತೀಚೆಗೆ ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿಯಾದಾಗ ಅವರ ಅನೇಕ ಆಪ್ತರ ಮನೆಗಳ ಮೇಲೂ ದಾಳಿಯಾಗಿತ್ತು. ಇದೀಗ ವಿಜಯ್ ಮುಳಗುಂದ ಅವರ ಮೇಲೆ ರೇಡ್ ನಡೆದಿರುವುದರ ಹಿಂದಿನ ಉದ್ದೇಶ ಏನು ಎಂಬುದನ್ನು ಕಾದು ನೋಡಬೇಕಿದೆ.

 

error: Content is protected !!
Scroll to Top