ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳುತ್ತಿದ್ದ ವೇಳೆ ಯುವಕ ಮೃತ್ಯು…!!!

(ನ್ಯೂಸ್ ಕಡಬ) newskadaba.com ದಾವಣಗೆರೆ, ಆ.30, ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನಿಗೆ ಓವರ್ ಡೋಸ್ ಔಷಧಿ ನೀಡಿ ಸಾವನಪ್ಪಿದ ಘಟನೆ ದಾವಣಗೆರೆ ಕೆ ಬಿ ಬಡಾವಣೆಯಲ್ಲಿರುವ ಜಾಧವ್ ಕ್ಲಿನಿಕ್  ಸಂಭವಿಸಿದೆ.

ನಗರದ ಕೆ ಬಿ ಬಡಾವಣೆಯಲ್ಲಿರುವ ಜಾಧವ್ ಕ್ಲಿನಿಕ್ ಗೆ ದಾವಣಗೆರೆ ಜಿಲ್ಲೆಯ ಹೊನ್ನೂರು ಗ್ರಾಮದ ಮಾರುತಿ (18) ಯನ್ನು ದಾಖಲು ಮಾಡಿದ್ರು. ರಾತ್ರಿ 8 ಗಂಟೆಯಿಂದ 9 ಗಂಟೆಯ ಒಳಗೆ ಐದು ಇಂಜೆಕ್ಷನ್, 2 ಗ್ಲೂಕೋಸ್ ನೀಡಿದ ಬಳಿಕ ಡಿಸ್ಚಾರ್ಜ್ ಮಾಡಿ ಮನೆಗೆ ಕಳುಹಿಸಿದ್ದಾರೆ.

ಆದ್ರೆ ಡಿಸ್ಚಾರ್ಜ್ ಮಾಡಿ 2 ಕಿಲೋಮೀಟರ್ ದೂರ ಸಾಗುತ್ತಿದ್ದಂತೆಯೇ ಯುವಕನ ಬಾಯಲ್ಲಿ ನೊರೆ ಬಂದಿದೆ. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಸ್ಥಳೀಯ ಅಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ ಅಷ್ಟೊತ್ತಿಗಾಗಲೇ ಮಾರುತಿ ಮೃತಪಟ್ಟಿದ್ದಾನೆ ಅಂತ ವೈದ್ಯರು ಹೇಳಿದ್ದಾರೆ.

Also Read  ಪುತ್ತೂರು: ದ್ವಿಚಕ್ರ ವಾಹನ ಢಿಕ್ಕಿ ➤ ಪಾದಚಾರಿ ಮೃತ್ಯು

ಇದರಿಂದ ಅಕ್ರೋಶಗೊಂಡ ಯುವಕನ ಸಂಬಂಧಿಕರು ಜಾಧವ್ ಕ್ಲಿನಿಕ್ ಬಳಿ ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈ ಸಂಬಂಧ ಕೆ.ಟಿ.ಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top