“ಐ ವಿಲ್ ಬ್ಯಾಕ್ “ಅಂತ ಡೆತ್ ನೋಟ್ ಬರೆದಿಟ್ಟು13ರ ಬಾಲಕ ಆತ್ಮಹತ್ಯೆಗೆ ಶರಣು ► ಕೊಲೆ ಶಂಕೆ…!!!

(ನ್ಯೂಸ್ ಕಡಬ) newskadaba.com ಕಡಬ, ಆ.29, 13 ವರ್ಷದ ಬಾಲಕನೊಬ್ಬ “ಐ ವಿಲ್ ಬ್ಯಾಕ್ “ಅಂತ ಡೆತ್ ನೋಟ್ ಬರೆದಿಟ್ಟು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಸಂಪಗಿರಾಮ ನಗರದಲ್ಲಿ ನಡೆದಿದೆ.

ಮೃತ ಬಾಲಕನನ್ನು ಸಂಪಂಗಿ ರಾಮನಗರದ ವಿನಾಯಕ ಶಾಲೆಯಲ್ಲಿ ಓದುತ್ತಿದ್ದ ಪ್ರವೀಣ್ ರಾಜ್ ಎಂದು ಹೇಳಲಾಗಿದೆ. ಬೆಂಗಳೂರಿನ ಸಂಪಗಿರಾಮ ನಗರದಲ್ಲಿರುವ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಡೆತ್ ನೋಟ್ ನಲ್ಲಿ ` ವಿಲ್ ಬ್ಯಾಕ್ಅಂತ ಬರೆದಿಟ್ಟಿದ್ದಾನೆ.

ಮೊದಲು ತಾಯಿ ಬೈದಿದ್ದಕ್ಕೆ ಬಾಲಕ ಆತ್ಮಹತ್ಯೆ ಮಾಡಿಕೊಂಡಿದ್ದು ಎನ್ನಲಾಗಿದ್ದು, ಬಳಿಕ ಬಾಲಕನ ಆತ್ಮಹತ್ಯೆಗೆ ಆತನ ಸೋದರ ಮಾವನೇ ಕಾರಣ ಅಂತ ಆರೋಪಿಸಲಾಗಿದೆಸೋದರ ಮಾವನೇ ಬಾಲಕನನ್ನು ಕೊಲೆ ಮಾಡಿದ್ದಾನೆ. ಆತನ ಟಾರ್ಚರ್ ನಿಂದಾಗಿ ತಮ್ಮ ಮಗ ಪ್ರವೀಣ್ ರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಷಕರು ಆರೋಪಿಸುತ್ತಿದ್ದಾರೆ.

Also Read  ಬಸ್ ಕಾಯುತ್ತಿದ್ದವರಿಗೆ ಬೈಕ್ ಢಿಕ್ಕಿ: ಮೂವರು ಮೃತ್ಯು

ಶವಗಾರದ ಮುಂದೆಯೇ ಸೋದರ ಮಾವನಿಗೆ ಮೃತನ ಸಂಬಂಧಿಗಳು ಹಿಗ್ಗಾಮುಗ್ಗವಾಗಿ ಥಳಿಸಿದ ಪರಿಣಾಮ ಸೋದರ ಮಾವ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕುರಿತು ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top