ಭೂಸೇನೆಯ ಮೇಜರ್ ಆಗಿ ಭಡ್ತಿ ಹೊಂದಿದ ಗ್ರಾಮೀಣ ಪ್ರತಿಭೆ ►ಕ್ಯಾಪ್ಟನ್ ಹುದ್ದೆಯಿಂದ ಮೇಜರ್ ಹುದ್ದೆಗೇರಿದ ಉದನೆಯ ವಿನೋಜ್ ಪಿ.ಜೆ.

(ನ್ಯೂಸ್ ಕಡಬ) newskadaba.com ಕಡಬ, ಆ.29, ಭೂಸೇನೆಯ ಮೇಜರ್ ಆಗಿ ಭಡ್ತಿ ಹೊಂದಿದ ಗ್ರಾಮೀಣ ಪ್ರತಿಭೆ ಕ್ಯಾಪ್ಟನ್ ಹುದ್ದೆಯಿಂದ ಮೇಜರ್ ಹುದ್ದೆಗೇರಿದ ಉದನೆಯ ವಿನೋಜ್ ಪಿ.ಜೆ. ಕಡಬ, ಆ.29. ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಹುದ್ದೆಯಲ್ಲಿದ್ದ ಪುತ್ತೂರು ತಾಲೂಕಿನ ಉದನೆ ನಿವಾಸಿ ಮೇ| ವಿನೋಜ್ ಪಿ.ಜೆ. (40) ಯವರು ಮಂಗಳವಾರದಂದು ಮೇಜರ್ ಆಗಿ ಭಡ್ತಿ ಹೊಂದಿದ್ದಾರೆ.

ಗ್ರಾಮೀಣ ಪ್ರತಿಭೆಯಾಗಿದ್ದುಕೊಂಡು ಕ್ರೀಡೆಯಲ್ಲಿ ಆಸಕ್ತಿ ಹೊಂದಿದ್ದ ವಿನೋಜ್ರವರು ನೆಲ್ಯಾಡಿಯ ಸೈಂಟ್ ಜಾರ್ಜ್ ವಿದ್ಯಾ ಸಂಸ್ಥೆಯಲ್ಲಿ 7ನೇ ತರಗತಿಯಲ್ಲಿರುವಾಗ ಭೂಸೇನಾ ಕ್ರೀಡಾಪಟುವಾಗಿ ಆಯ್ಕೆಗೊಂಡು ತನ್ನ ಕಠಿಣ ಪರಿಶ್ರಮದ ಮೂಲಕ ಕ್ಯಾಪ್ಟನ್ ಹುದ್ದೆಗೇರಿದ್ದರು. ಇದೀಗ ಭಡ್ತಿಗೊಂಡು ಮೇಜರ್ ಹುದ್ದೆಯನ್ನು ಅಲಂಕರಿಸಿದ್ದು, ಪ್ರಸ್ತುತ ಪುಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಉದನೆ ಪುತ್ತನ್ಪರಂಬಿಲ್ ನಿವಾಸಿ ಜೋಸೆಫ್ ಪಿ.ಸಿ. ಮತ್ತು ಮೇರಿ ದಂಪತಿಯ ಪುತ್ರರಾಗಿದ್ದಾರೆ.

Also Read  ಉದ್ಯೋಗ ಸಂದರ್ಶನಕ್ಕೆ ತೆರಳುವ ಮಹಿಳೆಯರು ಇನ್ಮುಂದೆ ವಾಸ್ತವ್ಯದ ಬಗ್ಗೆ ಚಿಂತೆ ಬಿಡಿ ➤ ಪ್ರಮುಖ ನಗರದಲ್ಲಿ ಎಲ್ಲಾ ಮಹಿಳೆಯರಿಗಾಗಿ ಲಭ್ಯವಿದೆ ಉಚಿತ ಟ್ರಾನ್ಸಿಟ್ ಹಾಸ್ಟೆಲ್

error: Content is protected !!
Scroll to Top