ಸಾರ್ವಜನಿಕ ಶ್ರೀ ಗಣೇಶೋತ್ಸವ ► ಮಕ್ಕಳಿಗೆ ಧರ್ಮ ತಿರುಳನ್ನು ಹೇಳಿಕೊಡುವಲ್ಲಿ ತಾಯಂದಿರ ಪಾತ್ರ ಮಹತ್ವದ್ದು ► ಕತ್ತಲ್ಸಾರ್

(ನ್ಯೂಸ್ ಕಡಬ) newskadaba.com ಕಡಬ, ಆ.29, ಮರ್ದಾಳ ಶ್ರೀ ಅಯ್ಯಪ್ಪ ಭಜನಾ ಮಂದಿರ ವಠಾರದಲ್ಲಿ 18ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ವಿಜ್ರಂಭನೆಯಿಂದ ನಡೆಯಿತು.

ಧಾರ್ಮಿಕ ಸಭೆಯಲ್ಲಿ ಮಾತನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದೂಧರ್ಮದ ಮೇಲೆ ಅನೇಕ ಪರಕೀಯ ದಾಳಿ ಆದರೂ ಅದನ್ನು ತಡೆದುಕೊಂಡಿದೆ. ಸ್ವಾತಂತ್ರ್ಯ ಬಳಿಕದಲ್ಲಿ ಮತಾಂತರ ದೇವರ ಅವಹೇಳನದಂತಹ ವೈಚಾರಿಕ ದಾಳಿ ನಡೆಯುತ್ತಿದೆ. ಇಂತಹ ಸಮಸ್ಯೆಗಳನ್ನು ಮುಂದಿನ ದಿನಗಳಲ್ಲಿ ಮೆಟ್ಟಿ ನಿಲ್ಲಬೇಕಾದರೆ ಇಂದು ಮಕ್ಕಳಿಗೆ ಧರ್ಮದ ತಿರುಳನ್ನು ಯುವ ಪೀಳಿಗೆಗೆ ತಿಳಿಸಯಪಡಿಸುವ ಕಾರ್ಯವಾಗಬೇಕು ಕರ್ನಾಟಕ ಸಂಸ್ಕಾರ ಭಾರತಿ ಲೋಕಕಲಾ ವಿಭಾಗ್ ಪ್ರಮುಖ್ ತುಳುವಬೊಳ್ಳಿ ದಯಾನಂದ ಕತ್ತಲ್ಸಾರ್ ಹೇಳಿದರು.

ಅಧ್ಯಕ್ಷತೆ ವಹಿಸಿದ ಎಪಿಎಂಸಿ ಸದಸ್ಯ ಮೇದಪ್ಪ ಗೌಡ ಡೆಪ್ಪುಣಿ ಮಾತನಾಡಿ ಗಣೇಶೋತ್ಸವವು ಕೇವಲ ಆಚರಣೆ ಸೀಮಿತವಾಗದೆ. ಧರ್ಮ ಹಾಗೂ ರಾಷ್ಟ್ರದ ಏಳಿಗೆಗಾಗಿ ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ನೀಡುವ ಒಂದು ಕಾರ್ಯವಾದಗ ಮಾತ್ರ ಆಚರಣೆಗೆ ನಿಜವಾದ ಅರ್ಥ ಸಿಗಲು ಸಾಧ್ಯ ಎಂದರು.
ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸುರೇಶ್ ರೈ, ಅಧ್ಯಕ್ಷರಾದ ಸತೀಶ್ಚಂದ್ರ ಮೈಕಾಜೆ, ಕಾರ್ಯದರ್ಶಿ ಪ್ರಮೋದ್ ರೈ ಕುಡಾಲ ಉಪಸ್ಥಿತರಿದ್ದರು.ಗೌರವಾಧ್ಯಕ್ಷ ಸುರೇಶ್ ರೈ ಸ್ವಾಗತಿಸಿ, ಉದಯಕುಮಾರ್ ರೈ ವಂದಿಸಿದರು. ಮಂಜುನಾಥ ಕೋಲಂತ್ತಾಡಿ ಕಾರ್ಯಕ್ರಮ ನಿರೂಪಿಸಿದರು.

Also Read  ಮೂಡಬಿದಿರೆ: ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ ಯುವಕ ಮೃತ್ಯು; ಇಬ್ಬರ ಸೆರೆ

ಬೆಳಿಗ್ಗೆ ಶ್ರೀಮಹಾಗಣಪತಿ ದೇವರ ಪ್ರತಿಷ್ಠೆ , ನಡೆದ ಬಳಿಕ ಕುಟ್ರುಪ್ಪಾಡಿ ತಾ.ಪಂ.ಸದಸ್ಯ ಗಣೇಶ್ ಕೈಕುರೆಯವರು ಧ್ವಜಾರೋಹಣ ನೆರವೇರಿಸಿದರು.ಮರ್ಧಾಳ ಶ್ರೀ ಅಯ್ಯಪ್ಪ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಶ್ರೀದೇವರಿಗೆ ಮಹಾಪೂಜೆ ನಡೆದು ಸಾಯಂಕಾಲ ಓಕುಳಿ ಏಲಂ ಬಳಿಕ ಮರ್ದಾಳದಿಂದ ಬಜಕೆರೆ ತನಕ ದೇವರ ಶೋಭಾಯಾತ್ರೆ ನಡೆಯಿತು.

error: Content is protected !!
Scroll to Top