ಮನೆಯಲ್ಲಿನ ವ್ಯವಸ್ಥೆಯನ್ನು ಸರಿ ಮಾಡಲಾಗದವನು ಸಮಾಜದ ನಾಯಕನಾಗಲು ಅನರ್ಹ►► ಪ್ರವೀಣ್ ಕುಮಾರ್ ಕೆಡೆಂಜಿ

(ನ್ಯೂಸ್ ಕಡಬ) newskadaba.com ಕಡಬ, ಆ.29, ಆಲಂಕಾರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಆಶ್ರಯದಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಾಯಕತ್ವ ಶಿಬಿರ ಕಾರ್ಯಕ್ರಮ ನಡೆಯಿತು.


ಪುತ್ತೂರು ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೆಡೆಂಜಿ ಶಿಬಿರವನ್ನು ಉದ್ಟಾಟಿಸಿ ಮಾತನಾಡಿ ಮನೆಯಲ್ಲಿನ ವ್ಯವಸ್ಥೆಯನ್ನು ಸರಿಮಾಡಲಾಗದವನು ಎಂದೂ ಸಮಾಜ ಸುಧಾರಣೆ ಮಾಡುವ ನಾಯಕನಾಗಲು ಅಸಾಧ್ಯ. ಪ್ರತಿಯೋಬ್ಬ ವ್ಯಕ್ತಿಯಲ್ಲಿ ನಾಯಕತ್ವದ ಗುಣ ಅಡಗಿದೆ. ಇದಕ್ಕೆ ಇಚ್ಚಾಶಕ್ತಿಯ ಜೊತೆಗೆ ವಿಶಾಲ ಮನೋದೃಷ್ಠಿ, ವಿಚಾರವನ್ನು ಗ್ರಹಿಸುವ ಶಕ್ತಿ, ತಾಳ್ಮೆ, ಆತ್ಮಸ್ಥೈರ್ಯ ಅತ್ಯಗತ್ಯ. ಎಲ್ಲಾ ಒಳಿತು ಕೆಲಸ ಕಾರ್ಯಗಳು ಮನೆಯಿಂದ ಪ್ರಾರಂಭವಾದಾಗ ಮಾತ್ರ ಸಮಾಜ ಸುಧಾರಿಸಲು ಸಾಧ್ಯ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆಲಂಕಾರು ಬಿಲ್ಲವ ಸಂಘದ ಅಧ್ಯಕ್ಷ ದಯಾನಂದ ಕರ್ಕೇರ ಮಾತನಾಡಿ, ಬಿಲ್ಲವ ಯುವ ಸಮುದಾಯವನ್ನು ರಾಜಕೀಯವಾಗಿ ಧುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯುವ ಸಮುದಾಯ ಎಚ್ಚೆತ್ತು ತಮ್ಮ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂದರು.

Also Read  ಗುತ್ತಿಗಾರು : ಅಕ್ರಮ ಗೋ ಸಾಗಾಟ, ಆರೋಪಿಗಳು ಪೊಲೀಸರ ವಶಕ್ಕೆ.!!

ಆಲಂಕಾರು ಬಿಲ್ಲವ ಸಂಘದ ಜೊತೆಕಾರ್ಯದರ್ಶಿ ಸದಾನಂದ ಕುಮಾರ್, ಕೋಟಿ ಚೆನ್ನಯ ಮಿತ್ರವೃಂದದ ಅಧ್ಯಕ್ಷ ದಿನೇಶ್ ಕೇಪುಳು, ಬಿಲ್ಲವ ಸಂಘದ ಉಪಾಧ್ಯಕ್ಷ ಸುಧಾಕರ ಪೂಜಾರಿ, ಮಾಜಿ ಅಧ್ಯಕ್ಷ ಜಯಂತ ಪೂಜಾರಿ ನೆಕ್ಕಿಲಾಡಿ, ಪೆರಾಬೆ ಬಿಲ್ಲವ ಸಂಘದ ಅಧ್ಯಕ್ಷ ಉದಯ.ಎಸ್.ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಡಾ| ರಾಜೇಶ್ ಬೆಜ್ಜಂಗಳರವರು ನಾಯಕತ್ವದ ಬಗ್ಗೆ ಮಾಹಿತಿ ಶಿಬಿರವನ್ನು ನಡೆಸಿಕೊಟ್ಟರು.

error: Content is protected !!
Scroll to Top