ಹೆತ್ತ ತಾಯಿಯ ಹೃದಯವನ್ನೇ ಕಿತ್ತು ► ಪೆಪ್ಪರ್ ಸ್ಪ್ರೇ ಹಾಕಿ ಚಟ್ನಿಯೊಂದಿಗೆ ತಿಂದು ತೇಗಿದ ಮಗ..!!!

(ನ್ಯೂಸ್ ಕಡಬ) newskadaba.com ಮುಂಬೈ, ಆ.29, ಹಸಿವೆಯನ್ನು ತಡೆದುಕೊಳ್ಳದ ಇಲ್ಲೊಬ್ಬ ತನ್ನ ತಾಯಿಯನ್ನೇ ಕೊಂದು ಆಕೆಯ ಹೃದಯನ್ನು ತಿಂದ ಆಘಾತಕಾರಿ ಘಟನೆಯೊಂದು ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸೋಮವಾರ ವರದಿಯಾಗಿದೆ.

ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಸೋಮವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಆರೋಪಿಯನ್ನು 27 ವರ್ಷದ ಸುನಿಲ್ ಎಂದು ಗುರುತಿಸಲಾಗಿದೆ. ಮೃತ ತಾಯಿಯನ್ನು 65 ವರ್ಷದ ಯೆಲಾವಾ ಎಂದು ಗುರುತಿಸಲಾಗಿದೆ. ಆರೋಪಿ ಸುನಿಲ್ 27 ವರ್ಷದ ನನ್ನು ಶಾಹುಪುರಿ ಪೊಲೀಸರು ಬಂಧಿಸಿದ್ದು, ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸುನಿಲ್ ತನ್ನ ತಾಯಿಯನ್ನು ಇರಿದು ಕೊಂದು ಬಳಿಕ ಆಕೆಯ ಹೃದಯವನ್ನು ಕಿತ್ತು ಚಟ್ನಿ ಹಾಗೂ ಮೆಣಸಿನಪುಡಿಯೊಂದಿಗೆ ನೆಂಚಿಕೊಂಡು ತಿಂದಿದ್ದಾನೆ. ಕೆಲವು ಗಂಟೆಗಳ ಬಳಿಕ ಆತ ಮನೆಯಿಂದ ಹೊರಬಂದಿದ್ದು, ಆತನ ಕೈಗಳು ರಕ್ತಸಿಕ್ತವಾಗಿತ್ತು ಎಂದು ವರದಿಯಾಗಿದೆ. 

ಘಟನೆ ಬಗ್ಗೆ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿರೋ ಶಹಾಪುರಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಸಂಜಯ್ ಮೋರೆ, ಸುನಿಲ್ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕಾರ್ಮಿಕ. ಈತನಿಗೆ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಹೆಂಡತಿ ತನ್ನ ಮಕ್ಕಳೊಂದಿಗೆ ಮುಂಬೈನ ತಾಯಿಯ ಮನೆಯಲ್ಲಿ ವಾಸಿಸುತ್ತಿದ್ದಾರೆ ತಿಳಿದುಬಂದಿದೆ.

Also Read  ಶಾಕಿಂಗ್ ನ್ಯೂಸ್ ► ಕರ್ನಾಟಕದ 20 ಎಂಜಿನಿಯರಿಂಗ್ ಕಾಲೇಜುಗಳಿಗೆ ಬೀಗ..!!!

ಘಟನೆ ನಡೆದ ದಿನ ಸುನಿಲ್ ಕಂಠಪೂರ್ತಿ ಕುಡಿದಿದ್ದ. ಮೊದಲು ಪಕ್ಕದ ಮನೆಗೆ ಹೋಗಿ ಊಟ ಕೇಳಿದ್ದ ಅವರು ಊಟ ಕೊಡದೇ ಇದ್ದಾಗ ತನ್ನ ಮನೆಗೆ ಹಿಂತಿರುಗಿ, ನಂತರ ತಾಯಿಯೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಕೋಪದಲ್ಲಿ ಆಕೆಯನ್ನು ಇರಿದು ಕೊಂದಿದ್ದಾನೆ. ನಂತರ ಆಕೆಯ ಹೃದಯವನ್ನು ತೆಗೆದು ಪ್ಲೇಟ್‍ನಲ್ಲಿ ಇಟ್ಟು ಚಟ್ನಿ ಹಾಗೂ ಪೆಪ್ಪರ್ ಸ್ಪ್ರೇ ಹಾಕಿದ್ದ. ಹೃದಯದ ಸ್ವಲ್ಪ ಭಾಗವನ್ನು ಆತ ತಿಂದಿರಬಹುದು ಎಂಬ ಶಂಕೆಯಿದೆ. ಸದ್ಯ ಆತನನ್ನು ಶಹಾಪುರಿ ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

error: Content is protected !!
Scroll to Top