(ನ್ಯೂಸ್ ಕಡಬ) newskadaba.com ಕಡಬ, ಆ. 29, ಕೊೖಲ-ಗೋಕುಲನಗರ ಯಕ್ಷನಂದನ ಕಲಾಸಂಘದ ವತಿಯಿಂದ ನಡೆಸಲ್ಪಡುವ ಯಕ್ಷಗಾನ ನಾಟ್ಯ ತರಬೇತಿ ಕಾರ್ಯಕ್ರಮ ಪೆರಿಯಡ್ಕ ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂದಿರದಲ್ಲಿ ಇತ್ತೀಚೆಗೆ ಉದ್ಘಾಟನೆಯಾಯಿತು.
ಶ್ರೀ ರಾಮಕುಂಜೇಶ್ವರ ವಿದ್ಯಾವರ್ಧಕ ಸಭಾದ ಕಾರ್ಯದರ್ಶಿ ರಾಧಾಕೃಷ್ಣ ಕೆ ಎಸ್ ಉದ್ಘಾಟಿಸಿ ಮಾತನಾಡಿ, ಯಕ್ಷಗಾನದಲ್ಲಿ ಕರಾವಳಿಯ ಇತಿಹಾಸ ಅಭಿವ್ಯಕ್ತಗೊಳ್ಳುತ್ತದೆ. ವಿದ್ಯಾರ್ಥಿಯ ಪ್ರತಿಭೆಯನ್ನು ಹೊರಹಾಕಲು ಯಕ್ಷಗಾನದಲ್ಲಿ ಅವಕಾಶವಿದೆ. ಆ ನಿಟ್ಟಿನಲ್ಲಿ ಪೋಷಕರೂ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಬೇಕು. ಯಕ್ಷಗಾನವನ್ನು ಮತ್ತಷ್ಟು ಬೆಳೆಸಲು ವಿದ್ಯಾರ್ಥಿಗಳು ಒಲವು ತೋರಿಸಬೇಕು ಎಂದು ಹೇಳಿದರು.
ನಾಟ್ಯಗುರುಗಳಾದ ತೆಂಕುತಿಟ್ಟಿನ ಹಿರಿಯ ಸ್ತ್ರೀ ಪಾತ್ರಧಾರಿ ಅಂಬಾ ಪ್ರಸಾದ ಮಾತನಾಡಿ ಕಲಿಕೆ ಎಂಬುದು ನಿರಂತರ. ಯಾವುದೇ ಕಲಿತಂತಹ ವಿದ್ಯೆಯನ್ನು ಅವಕಾಶ ಬಂದಾಗ ಉಪಯೋಗಿಸಬೇಕು. ಗುರುವು ಕಲಿಸಿದ ವಿಷಯದಲ್ಲಿ ವಿದ್ಯಾರ್ಥಿಯು ಸಾಧನೆಯನ್ನು ಮಾಡುವುದೇ ಗುರುವಿಗೆ ಸಮರ್ಪಿಸುವ ದೊಡ್ಡ ದಕ್ಷಿಣೆ ಎಂದರು.
ಯಕ್ಷನಂದನ ಕಲಾಸಂಘ ಅಧ್ಯಕ ಕಂಪ ಶಿವರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು. ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿ ಸದಸ್ಯ ಬೊಳ್ಳಾವು ಶಂಕರನಾರಾಯಣ ಭಟ್ , ಯಕ್ಷನಂದನ ಕಲಾಸಂಘದ ಭಾಸ್ಕರ ಬಟ್ಟೋಡಿ ಉಪಸ್ಥಿತರಿದ್ದರು. ಸಂಘದ ಸಂಚಾಲಕ ಗಣರಾಜ ಕುಂಬ್ಳೆ ಪ್ರಾಸ್ತಾವನೆಗೈದರು. ಸಂಘದ ಉಪಾಧ್ಯಕ್ಷ ಹರಿಕಿರಣ್ ಕೊೖಲ ಸ್ವಾಗತಿಸಿದರು. ಕೃಷ್ಣಮೂರ್ತಿ ಕೆಮ್ಮಾರ ನಿರೂಪಿಸಿದರು.