ಕಡಬದಲ್ಲಿ 44 ನೇ ವರ್ಷದ ಅದ್ಧೂರಿ ಗಣೇಶೋತ್ಸವ ►ಶೋಭಾಯಾತ್ರೆ

(ನ್ಯೂಸ್ ಕಡಬ) newskadaba.com ಕಡಬ, ಆ.29, ಕಡಬದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ 44 ನೇ ಸಾರ್ವಜನಿಕ ಗಣೇಶೋತ್ಸವ ಶುಕ್ರವಾರದಂದು ಆರಂಭಗೊಂಡು 3 ದಿನಗಳ ಕಾಲ ನಡೆಯಿತು.


ಆರಂಭದ ದಿನ ಗಣಪತಿ ವಿಗ್ರಹ ಪ್ರತಿಷ್ಠಾಪನೆ ಬಳಿಕ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳಿಗೆ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವಠಾರದಲ್ಲಿ ಕಡಬ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಚಾಲನೆ ನೀಡಿ ಮಾತನಾಡಿ, ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ, ಅನ್ಯೋನ್ಯತೆ ಮತ್ತು ಸೌಹಾರ್ದತೆ ಹೆಚ್ಚಾಗಲು ಸಾರ್ವಜನಿಕ ಉತ್ಸವಗಳು ಸಹಕಾರಿ. ಸಾಮೂಹಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆತ್ತವರ ಜೊತೆಗೆ ತಮ್ಮ ಮಕ್ಕಳು ಕೂಡ ಪಾಲ್ಗೊಳ್ಳುವ ಮೂಲಕ ಮಕ್ಕಳಲ್ಲಿಯೂ ಧಾರ್ಮಿಕ ಆಚರಣೆಗಳ ಬಗ್ಗೆ ಅರಿವು ಮೂಡಲು ಸಾಧ್ಯ ಎಂದರು. ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಿತು. ಬಳಿಕ ಮಹಾಗಣಪತಿ ಹೋಮ, ಶ್ರೀ ಕಂಠ ಸ್ವಾಮಿ ಹಾಗೂ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಮಹಾಪೂಜೆ, ಸಂಜೆ ಭಜನಾ ಕಾರ್ಯಕ್ರಮ ನಡೆಯಿತು. ರಾತ್ರಿ ಯಕ್ಷ ಕಿನ್ನರ ಬಳಗದಿಂದ “ಶ್ರೀ ರಾಮದರ್ಶನ” ಯಕ್ಷಗಾನ ಪ್ರದರ್ಶನಗೊಂಡಿತು.

Also Read  ಬೆಳ್ಳಾರೆ: ಅಂಗಡಿಗೆ ನುಗ್ಗಿ ನಗದು ಕಳ್ಳತನ ➤ ಆರೋಪಿ ಪೊಲೀಸ್‌ ವಶಕ್ಕೆ

ಶನಿವಾರ ಬೆಳಿಗ್ಗೆ ಮಹಾಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು, ಸಾಯಂಕಾಲ ವಿದುಷಿ ಮಾನಸ ರೈ ಮತ್ತು ಶಿಷ್ಯ ವೖಂದದಿಂದ ಭರತನಾಟ್ಯ ನಡೆಯಿತು. ರಾತ್ರಿ ಧಾರ್ಮಿಕ ಸಭೆ ನಡೆಯಿತು. ಬಳಿಕ ಶ್ರೀ ವಿಘ್ನೇಶ್ವರ ಕಲಾ ಸಂಘ ಕಡಬ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೆಸ್ಕಾಂ ಸಿಬಂದಿ ಮತ್ತು ಅತಿಥಿ ಕಲಾವಿದರ ಸಂಯುಕ್ತ ಆಶ್ರಯದಲ್ಲಿ ಶ್ರೀ ಸತ್ಯಹರಿಶ್ಚಂದ್ರ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

ಆದಿತ್ಯವಾರ ಬೆಳಿಗ್ಗೆ ಕಡ್ಯ ವಾಸುದೇವ ಭಟ್ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಗಣಹೋಮ, ಮಧ್ಯಾಹ್ನ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ಬಳಿಕ ಓಕುಳಿ ಏಲಂ ನಡೆದು ಸಾಯಂಕಾಲ ಕಡಬದಿಂದ ಹೊಸಮಠದವರೆಗೆ ವಿಗ್ರಹದ ಶೋಭಾಯಾತ್ರೆ ನಡೆದು ಗುಂಡ್ಯ ಹೊಳೆಯಲ್ಲಿ ವಿಗ್ರಹವನ್ನು ಜಲಸ್ತಂಭನ ಮಾಡಲಾಯಿತು. ಕಾರ್ಯಕ್ರಮದಲ್ಲಿ ದೇವಳದ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ವ್ಯವಸ್ಥಾಪನ ಸಮಿತಿಯ ಮಾಜಿ ಅಧ್ಯಕ್ಷ ಸೀತಾರಾಮ ಗೌಡ ಪೊಸವಳಿಕೆ, ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಿ., ಕಾರ್ಯದರ್ಶಿ ಮಹೇಶ ಕೋಡಿಬೈಲು , ಉಪಾಧ್ಯಕ್ಷ ಮಂಜುನಾಥ ಶೆಟ್ಟಿ ನವಸುಮ, ಜತೆ ಕಾರ್ಯದರ್ಶಿ ಯತೀಶ್ ಹೊಸಮನೆ, ಕೋಶಾಧಿಕಾರಿ ಜಯರಾಮ ಆರ್ತಿಲ, ಧಾರ್ಮಿಕ ಉತ್ಸವ ಸಮಿತಿಯ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಕಾರ್ಯದರ್ಶಿ ಗಿರೀಶ್ ಎ.ಪಿ., ಕೋಶಾಧಿಕಾರಿ ಎಸ್.ಜಿನ್ನಪ್ಪ ಸಾಲಿಯಾನ್, ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೈ, ಮತ್ತಿತರಿದ್ದರು.

error: Content is protected !!
Scroll to Top