(ನ್ಯೂಸ್ ಕಡಬ) newskadaba.com ಅಹಮದಾಬಾದ್, ಆ.28, ಟ್ರಕ್ ಹಾಗೂ ತೂಫಾನ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ಒಂದೇ ಕುಟುಂಬದ 10 ಮಂದಿ ದಾರುಣವಾಗಿ ಮೃತಪಟ್ಟ ಘಟನೆ ಅಹಮದಾಬಾದ್‍ನ ಧಂಡುಕಾ- ಬರ್ವಾಲಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರದಂದು ನಡೆದಿದೆ.
ವಡೋದರಾದ ಕುಟುಂಬವೊಂದು ತೂಫಾನ್ ವಾಹನದಲ್ಲಿ ದೇವಸ್ಥಾನಕ್ಕೆ ಹೊರಟಿದ್ದ ವೇಳೆ ಟ್ರಕ್‍ಗೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಚಾಲಕ ಸೇರಿ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಾಲಕ ನಿದ್ದೆಯ ಮಂಪರಿನಲ್ಲಿದ್ದ ವಾಹನ ಚಲಾಯಿಸಿದ್ದೇ ಘಟನೆಗೆ ಕಾರಣವಾಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಓರ್ವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಮೃತರನ್ನು ವಡೋದರಾ ನಿವಾಸಿಗಳಾದ ಕಿರಣ್ ಕಮಲೇಶ್ ಶಾ(45), ಅವರ ಪುತ್ರಿ ಜಿನಾಲಿ(20), ಮಗ ನೆಮಿಲ್(17), ಶಶಿಕಾಂತ್(56) ರೀಟಾ(52), ಧಾರಾ(25) ಹಿತೇಶ್ ಶಾ(52) ವಿಭಾ(48), ನಂದೀಪ್(22) ಎಂದು ಗುರುತಿಸಲಾಗಿದೆ.