200, 50 ರೂ. ಹೊಸ ನೋಟು ಪಡೆಯಲು ಮುಗಿಬಿದ್ದ ಜನ…!!!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.28, ಗಣೇಶ ಹಬ್ಬದಂದು ಆರ್`ಬಿಐ ಬಿಡುಗಡೆಗೊಳಿಸಿದ 200, 50 ರೂ. ಹೊಸ ನೋಟು ಸೋಮವಾರದಿಂದ ಬೆಂಗಳೂರಿನಲ್ಲಿ ಲಭ್ಯವಾಗುತ್ತಿದೆ. ಹೊಸ ನೋಟು ಪಡೆಯಲು ಜನ ನೃಪತುಂಗ ರಸ್ತೆಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುಂದೆ ಕ್ಯೂ ನಿಂತಿದ್ಧಾರೆ.

ಆಗಸ್ಟ್ 25ರಂದು ಹೊಸ ನೋಟುಗಳು ಬಿಡುಗಡೆಯಾದರೂ ಅಂದು ಭ್ಯಾಂಕ್ ರಜೆ ಇದ್ದ ಕಾರಣ ಬೆಂಗಳೂರಿಗೆ ನೋಟುಗಳ ರವಾನೆ ಆಗಿರಲಿಲ್ಲ. ಇದೀಗ, ಬೆಂಗಳೂರು ರಿಸರ್ವ್ ಬ್ಯಾಂಕ್ ಶಾಖೆಗೆ ಹೊಸ ನೋಟುಗಳ ಆಗಮನವಾಗಿದೆ. ಇಂದಿನಿಂದ ಇತರೆ ಬ್ಯಾಂಕ್ ಗಳಿಗೂ ನೋಟುಗಳ ರವಾನೆ ಆರಂಭವಾಗಲಿದೆ. ಹೊಸ ನೋಟುಗಳಿಗೆ ಅನುಗುಣವಾಗಿ ಎಟಿಎಂ ಅಪ್ಡೇಟ್ ಮಾಡುವ ಕಾರ್ಯ ಸಹ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ಎಟಿಎಂಗಳಲ್ಲೂ ಸಹ ಹೊಸ ನೋಟುಗಳು ಸಿಗಲಿವೆ. 

Also Read  ಮಾಜಿ ಶಾಸಕ ಕಲ್ಲಪ್ಪ ಮಗೆಣ್ಣನವರ ಕಾರು ಅಪಘಾತ ➤ 6 ಮಂದಿಗೆ ಗಾಯ

200 ರೂ. ಹೊಸ ನೋಟು ಹಳದಿ ಬಣ್ಣ ಹೊಂದಿದ್ದು, ಸ್ವಚ್ಛ ಭಾರತ ಲೋಗೋ, ಸಾಂಚಿ ಸ್ತೂಪ, ಅಶೋಕ ಸ್ತಂಭ, ಮಹಾತ್ಮಾ ಗಾಂಧೀಜಿ ಚಿತ್ರವಿದೆ. 50 ರೂ. ನೋಟಿನಲ್ಲಿ ಕರ್ನಾಟಕ ಹೆಮ್ಮೆಯ ಹಂಪಿ ಕಲ್ಲಿನ ರಥ, ಸ್ವಚ್ಛ ಭಾರತ ಲೋಗೋ, ಮಹಾತ್ಮಾ ಗಾಂಧೀಜಿ ಚಿತ್ರಗಳಿವೆ. ಎರಡೂ ನೋಟುಗಳಲ್ಲಿ ಅಂಧರಿಗೆ ಅನುಕೂಲವಾಗುವಂತಹ ಲಕ್ಷಣಗಳನ್ನ ಅಳವಡಿಸಲಾಗಿದೆ.

error: Content is protected !!
Scroll to Top