ಗಣೇಶ ವಿಸರ್ಜನೆ ವೇಳೆ ಅವಘಢ ► ಇಬ್ಬರು ಬಲಿ

(ನ್ಯೂಸ್ ಕಡಬ) newskadaba.com ಬೆಂಗಳೂರು, ಮಂಡ್ಯ, ಆ.28, : ಗಣೇಶ ವಿಸರ್ಜನೆಯ ವೇಳೆ ಸಂಭವಿಸಿದ ಅವಘಡದಿಂದ ಇಬ್ಬರು ಬಲಿಯಾದ ಘಟನೆ ಬೆಂಗಳೂರು ಮತ್ತು ಮಂಡ್ಯದಲ್ಲಿ ಆದಿತ್ಯವಾರ ನಡೆದಿದೆ.

ಅವಘಡಕ್ಕೆ ಬೆಂಗಳೂರಿನಲ್ಲಿ 15 ವರ್ಷದ ವೆಂಕಟೇಶ ಹಾಗೂ ಮಂಡ್ಯದಲ್ಲಿ 25 ವರ್ಷದ ವಿಜಯಕುಮಾರ್ ಬಲಿಯಾದ ದುರ್ದೈವಿಗಳು. ಬೆಂಗಳೂರಿನಲ್ಲಿ ಗಣೇಶ ಚತುರ್ಥಿಯ ಮೂರನೇ ದಿನ ಮೂರ್ತಿ ವಿಸರ್ಜನೆ ಮಾಡಲು ಹೊರಟ ಟೆಂಪೋವೊಂದು ಬಾಲಕ ವೆಂಕಟೇಶ್ ಮೇಲೆ ಹರಿದಿದೆ. ಪರಿಣಾಮ ಗಣೇಶ ವಿಸರ್ಜನೆ ನೋಡಲು ಬಂದಿದ್ದ ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದನು.

ಗಣೇಶ ಹೊತ್ತ ಟೆಂಪೋ ಚಾಲಕ ಕುಡಿದು ವಾಹನ ಚಲಾಯಿಸಿದ್ದೇ ಇದಕ್ಕೆ ಕಾರಣ ಅಂತ ಬಾಲಕನ ಪೋಷಕರು ಆರೋಪಿಸುತ್ತಿದ್ದಾರೆ. ಗಜಾನನ ಯುವಕರ ಸಂಘ ಕುರುಬರಹಳ್ಳಿ, ಜೆಸಿ ನಗರದ ಕೆಇಬಿ ಬಳಿ ಗಣೇಶನ ಇಟ್ಟು, ಭಾನುವಾರ ರಾತ್ರಿ ಮೂರ್ತಿ ವಿಸರ್ಜನೆ ಮಾಡಲು ಹೊರಟಿದ್ರು. ಅದ್ರೇ 11ನೇ ಮುಖ್ಯರಸ್ತೆಗೆ ಬರುತ್ತಿದ್ದಂತೆ ಗಾಡಿ ಏಕಾಏಕಿ ನಿಯಂತ್ರಣ ಕಳೆದುಕೊಂಡು ರಸ್ತೆಯಲ್ಲಿ ನಿಲ್ಲಿಸಿದ್ದ ಗಾಡಿಗಳಿಗೆ, ಜನರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

Also Read  ದ.ಕ.ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆಯಲ್ಲಿ 105 ಪದಕ ಗೆದ್ದ ಹೈಫ್ಲೈಯರ್ಸ್ ಕ್ಲಬ್

ಅಮಾಯಕ ಬಾಲಕನ ಸಾವಿನ ಜೊತೆಗೆ ಹಲವರು ಗಾಯಗೊಂಡಿದ್ದಾರೆ. ಮರಳುದಿಬ್ಬಕ್ಕೆ ಟೆಂಪೊ ಡಿಕ್ಕಿ ಹೊಡೆದು ನಿಲ್ಲದೇ ಇದ್ದಲ್ಲಿ ಮತ್ತಷ್ಟು ಅನಾಹುತ ಆಗುತ್ತಿತ್ತು. ತಮಟೆ ಶಬ್ದ ಕೇಳಿ ಮನೆಯಿಂದ ಹೊರಗಡೆ ಬಂದು ಈ ರೀತಿ ಸಾವನ್ನಪ್ಪಿದ್ದಾನೆ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತ ಬಾಲಕನ ಕುಟುಂಬಸ್ಥರು ಇದೀಗ ಆರೋಪಿಸುತ್ತಿದ್ದಾರೆ.

ಇನ್ನು ಮಂಡ್ಯದಲ್ಲಿ ಕೂಡ ಗಣೇಶ ಮೂರ್ತಿ ವಿಸರ್ಜನೆ ವೇಳೆ ವಿಜಯ್ ಕುಮಾರ್ ಎಂಬವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಜಿಲ್ಲೆಯ ಮಳವಳ್ಳಿ ತಾಲೂಕಿನ ರಾಗಿ ಬೊಮ್ಮನಹಳ್ಳಿಯಲಿನೀ ಅವಘಡ ಸಂಭವಿಸಿದೆ. ಸದ್ಯ ವಿಜಯ್ ಕುಮಾರ್ ಮೃತದೇಹ ಕೂಡಾ ಪತ್ತೆಯಾಗಿದೆ. ಆದಿತ್ಯವಾರ ಸಂಜೆಯಿಂದ ವಿದ್ಯುತ್ ದೀಪಗಳ ಸಹಾಯದಿಂದ ತಡರಾತ್ರಿವರೆಗೂ ಶೋಧ ನಡೆಸಿ ಶವ ಹುಡುಕಿ ಹೊರ ತೆಗೆಯಲಾಗಿದೆ. ಸದ್ಯ ವಿಜಯ್‍ಕುಮಾರ್ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.

error: Content is protected !!
Scroll to Top