ಮೂಡಬಿದ್ರೆ : ಪೊಲೀಸ್ ಹಳೇ ಕ್ವಾಟ್ರಸ್ ವಿಲೇವಾರಿ -ಬಹಿರಂಗ ಹರಾಜು



(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.18. ಮೂಡಬಿದ್ರೆ ಪೊಲೀಸ್ ಠಾಣೆಯ ಬ್ಲಾಕ್-1 ಮತ್ತು ಬ್ಲಾಕ್-2 ರಲ್ಲಿರುವ ಹಳೆಯ ಒಟ್ಟು 13 ವಸತಿ ಗೃಹಗಳನ್ನು ನೆಲಸಮಗೊಳಿಸಿ ಅವುಗಳಲ್ಲಿನ ಸಾಮಾಗ್ರಿಗಳನ್ನು ಹೇಗಿವೆಯೋ ಅದೇ ಸ್ಥಿತಿಯಲ್ಲಿ ಬಹಿರಂಗ ಹರಾಜು ಮುಖಾಂತರ ವಿಲೇವಾರಿ ಮಾಡಲಾಗುತ್ತದೆ. ಆಸಕ್ತಿ ಉಳ್ಳವರು ಸದರಿ ಟೆಂಡರ್/ ಬಹಿರಂಗ ಹರಾಜಿನಲ್ಲಿ ನಿಬಂಧನೆಗಳನ್ವಯ ಭಾಗವಹಿಸಬಹುದು.





ಹರಾಜಿನಲ್ಲಿ ಭಾಗವಹಿಸಲು ಇಚ್ಚಿಸುವವರು ಶಿಥಿಲಾವಸ್ಥೆಯಲ್ಲಿರುವ 13 ಪೊಲೀಸ್ ವಸತಿ ಗೃಹ ಕಟ್ಟಡವನ್ನು ಮುಂಚಿತವಾಗಿ ವೀಕ್ಷಿಸಬಹುದು, ಯಶಸ್ವಿ ಬಿಡ್‍ದಾರರು ಕಟ್ಟಡ ತೆರವುಗೊಳಿಸುವ ಸಂಧರ್ಭದಲ್ಲಿ ಯಾವುದೇ ರೀತಿಯ ಅವಘಡಗಳು ಯಾರಿಗಾದರೂ ಸಂಭವಿಸಿದ್ದಲ್ಲಿ ಬಿಡ್‍ದಾರರೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸ್ ಆಯುಕ್ತರ ಕಚೇರಿ, ಮಂಗಳೂರು ಅಥವಾ ಮೂಡಬಿದ್ರೆ ಪೊಲೀಸ್ ಠಾಣೆ ಸಂಪರ್ಕಿಸಬಹುದೆಂದು  ಪ್ರಕಟಣೆ ತಿಳಿಸಿದೆ.






error: Content is protected !!
Scroll to Top