ನಾಳೆಯಿಂದ ರಸ್ತೆ ಸಂಚಾರ ಗಣತಿ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.18. 2020ನೇ ಸಾಲಿನಲ್ಲಿ ರಸ್ತೆ ಸಂಚಾರ ಗಣತಿಯು ಫೆಬ್ರವರಿ 19 ರಂದು ಬೆಳಿಗ್ಗೆ 6 ಗಂಟೆಯಿಂದ ಫೆಬ್ರವರಿ 26 ರ ಬೆಳಿಗ್ಗೆ 6 ಗಂಟೆಯವರೆಗೆ ಸತತವಾಗಿ 7 ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿನ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಆಯ್ದ ಸ್ಥಳಗಳಲ್ಲಿ ನಡೆಯಲಿದೆ.


ಗಣತಿ ಕಾರ್ಯ ನಡೆಯುವ ಸ್ಥಳದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ಈ ಗಣತಿ ಕೇಂದ್ರಗಳಲ್ಲಿ ಒಂದು ನಿಮಿಷ ವಾಹನ ನಿಲ್ಲಿಸುವ ಮೂಲಕ ರಸ್ತೆ ಸಂಚಾರ ಗಣತಿಗೆ ವಾಹನ ಚಾಲಕರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಸೂಪರಿಂಟೆಂಡಿಂಗ್ ಇಂಜಿನಿಯರ್ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಮಂಗಳೂರು ವೃತ್ತ ಇವರ ಪ್ರಕಟಣೆ ತಿಳಿಸಿದೆ.

Also Read  ಕಲ್ಲು ಸಾಗಾಟದ ಟಿಪ್ಪರ್ ಪಲ್ಟಿ - ಚಕ್ರದಡಿ ಸಿಲುಕಿ ಇಬ್ಬರ ದುರ್ಮರಣ

error: Content is protected !!
Scroll to Top