ಕಾಜೂರು ಉರೂಸ್ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com,  ಬೆಳ್ತಂಗಡಿ. ಫೆ.17. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಸರ್ವಧರ್ಮೀಯರ ಆಶಾ ಕೇಂದ್ರವಾದ ಕಾಜೂರು ದರ್ಗಾ ಶರೀಫ್ ನ  ಈ ವರ್ಷದ ಐತಿಹಾಸಿಕ ಉರೂಸ್ ಸಮಾರಂಭದಲ್ಲಿ ಸಾವಿರಾರು ಮಂದಿ ಸರ್ವ ಧರ್ಮೀಯರು ಪಾಲ್ಗೊಂಡಿದ್ದರು. ಪುಣ್ಯ ಪುರುಷರು ಸಮಾಧಿಯಾದ ದರ್ಗಾಕ್ಕೆ ಭೇಟಿ ನೀಡಿದ ಸರ್ವ ಮುಸ್ಲಿಂ ಬಾಂಧವರು ಕುರಾನ್ ಪಠಿಸಿ ತಮ್ಮ ಇಷ್ಟಾರ್ಥ ನೆರವೇರಲು ಹರಕೆ ರೂಪವಾಗಿ ಮಲ್ಲಿಗೆ ಹೂ ಹಾಗೂ ಚಾದರವನ್ನು ಅರ್ಪಿಸಿದರು.

ಉರೂಸ್ ಪ್ರಯುಕ್ತ ಫೆ.7ರಿಂದ ಆರಂಭಗೊಂಡ ಸಾಮೂಹಿಕ ಸಂಭ್ರಮ ಫೆ.16ರವರೆಗೆ ನಿರಂತರವಾಗಿ ಹಗಲು ರಾತ್ರಿ ಧಾರ್ಮಿಕ ಪ್ರವಚನ ಸೇರಿದಂತೆ ಪ್ರಾರ್ಥನೆ ನೆರವೇರಿತು.

Also Read  ಮರ್ಧಾಳ: ದುರ್ವರ್ತನೆ ತೋರಿದ ನಾಲ್ವರು ಯುವಕರು ಪೊಲೀಸ್ ವಶಕ್ಕೆ

error: Content is protected !!
Scroll to Top