ಮಂಗಳೂರು: ಡೊಂಗರಕೇರಿ ಶ್ರಿ ವೆಂಕಟರಮಣ ದೇವಸ್ಥಾನದಲ್ಲಿ 7 ದಿನಗಳ ಕಾಲ ಶ್ರೀಮದ್ ಬಾಗವತ ಸಪ್ತಾಹ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.17. ನಗರದ ಡೊಂಗರಕೇರಿ ಶ್ರಿ ವೆಂಕಟರಮಣ ದೇವಸ್ಥಾನದಲ್ಲಿ 7 ದಿನಗಳ ಕಾಲ ನಡೆಯಲಿರುವ ಶ್ರೀಮದ್ ಬಾಗವತ ಸಪ್ತಾಹವನ್ನು ಶುಕ್ರವಾರ ಉದ್ಘಾಟಿಸಲಾಯಿತು. ಈ ಸಂಧರ್ಭ ಶ್ರೀಮದ್ ಬಾಗವತ್ ಪ್ರವಚನಕಾರ ವಿದ್ವಾನ್ ಡಾ| ಉದಯಕುಮಾರ್ ಸರಳತ್ತಾಯ, ವೇದಮೂರ್ತಿ ಜಯರಾಂಭಟ್ ಚಂಚಲ್ಗಡ್, ಗೋಪಿಚಾಂಧವ ಶೇಟ್, ವಿನಾಯಕ್ ಶೇಟ್, ದಯಾನಂದ್. ಕೆ. ಶೇಟ್, ಮ್ಯಾನೇಜರ್ ಹರಿಂದ್ರನಾಥ್, ವೆಂಕಟಕೃಷ್ಣ ಶೇಟ್ ಕುಟುಂಬ, ರೇಖಾ ತೋಲೆದಾರ್, ವೈಶ್ಯ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಶ್ರೀನಿವಾಸ್ ಪುಂಡಲೀಕ ಶೇಟ್ ಉಪಸ್ಥಿತರಿದ್ದರು.

ಪ್ರಥಮ ದಿನದ ಉಪನ್ಯಾಸ ಮಾಲಿಕೆಯ ಸಂಧರ್ಭ ಪ್ರವಚನಗೈದ ವಿದ್ವಾನ್ ಡಾ| ಉದಯಕುಮಾರ್ ಸರಳತ್ತಾಯರವರು, ಹಿಂದಿನ ಕಾಲದ ಜನರು ವೇದ ಪುರಾಣಗಳಲ್ಲಿ, ದೇವರಲ್ಲಿ ನಂಬಿಕೆ ಇಟ್ಟು ಶಾಂತಿ ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ ಇಂದು ಜನರು ಹೆಚ್ಚಿನ ಸುಖಕ್ಕಾಗಿ “ಶಾಂತಿ”ಯನ್ನು ಬಿಟ್ಟು ಹಣದ  ಹಿಂದೆ ಹೋಗುತ್ತಿದ್ದಾರೆ. ಸಾರ್ವಜನಿಕರು ಶ್ರೀಮದ್ ಭಾಗವತ ಪ್ರವಚನದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದರಿಂದ ಆಚಾರ ವಿಚಾರ, ಸದ್ವಿಚಾರಗಳನ್ನು ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಜೊತೆಗೆ ಇದೊಂದು ಪುಣ್ಯ ಸಂಪಾದನೆಗೆ ಮಾರ್ಗವು ತೋರುತ್ತದೆ ಎಂದು ತಿಳಿಸಿದರು. ಸಭಾಕಾರ್ಯಕ್ರಮವನ್ನು ಶ್ರೀನಿವಾಸ್ ಶೇಟ್ ಸ್ವಾಗತಿಸಿ, ನಿರೂಪಿಸಿದರು. ಸಪ್ತಾಹದ ಪ್ರಥಮ ದಿನ ಸುಮಾರು 150 ಮಂದಿ ಸದ್ಭಕ್ತರು ಭಾಗವಹಿಸಿದ್ದರು. ಭಾಗವತ ಸಪ್ತಾಹ ಕಾರ್ಯಕ್ರಮ 14-02-2020 ಶುಕ್ರವಾರದಿಂದ ಪ್ರಾರಂಭಗೊಂಡು ದಿನಾಂಕ 20-02-2020ರ ಗುರುವಾರ ತನಕ ಪ್ರತಿದಿನ 5.30 ರಿಂದ 7.30ರ ಪ್ರವಚನ ನಡೆಯಲಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ದೇವಸ್ಥಾನದ ಆಡಳಿತ ಮಂಡಳಿಯವರು ವಿನಂತಿಸಿ ಕೊಂಡಿದ್ದಾರೆ.

Also Read  Fundraising Management Software for Nonprofits

error: Content is protected !!
Scroll to Top