ನೂಜಿಬಾಳ್ತಿಲ; ಹಾಸ್ಯ ನಟ ಅರವಿಂದ ಬೋಳಾರ್‍ಗೆ ಸಮ್ಮಾನ

(ನ್ಯೂಸ್ ಕಡಬ) newskadaba.com, ಕಡಬ, ಫೆ.6.  ತುಳು ಚಿತ್ರರಂಗ, ನಾಟಕ ರಂಗಭೂಮಿಯ ಹಾಸ್ಯ ಕಲಾವಿದ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರನ್ನು ನೂಜಿಬಾಳ್ತಿಲ ಕನ್ವರೆ ಸಾರಿಮಂಟಮೆಯಲ್ಲಿ ಸಮ್ಮಾನಿಸಿ ಗೌರವಿಸಲಾಯಿತು.

ಸೋಮವಾರ ಕನ್ವರೆ ಸಾರಿಮಂಟಮೆ ಶ್ರೀ ರಾಜನ್ ದೈವದ ನೇಮೋತ್ಸವ ಪ್ರಯುಕ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಲಾ ಮಕ್ಕಳಿಂದ ಹಾಗೂ ಗ್ರಾಮಸ್ಥರಿಂದ ವಿವಿಧ ವಿನೋಧಾವಳಿಗಳು, ಬಾಲಕೃಷ್ಣ ಗೌಡ ಶಾಂತಿಗುರಿ ಅವರ ಪ್ರಾಯೋಜಕತ್ವದಲ್ಲಿ ಆನಂದ ಮತ್ತು ಬಳಗದವರ ಉಪ್ಪಿನಂಗಡಿ ಬೀಟ್ ಡಾನ್ಸ್ ವಾರಿಯರ್ಸ್ ತಂಡದಿಂದ ನೃತ್ಯ ವೈಭವಹಾಸ್ಯ ನಡೆಯಿತು. ನಟ ಅರವಿಂದ ಬೋಳಾರ್ ಹಾಗೂ ಯಕ್ಷಬೊಳ್ಳಿ ದಿನೇಶ್ ರೈ ಕಡಬ ಹಾಗೂ ಲಕ್ಷ್ಮಣ ಆಚಾರ್ಯ ಎಡಮಂಗಲ, ಎಡಮಂಗಲ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂಡಳಿ ಹಾಗೂ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ತಂಗಡಿ- ಚಂದನೆ ತುಳು ಯಕ್ಷಗಾನ ಬಯಲಾಟ ನಡೆಯಿತು.

Also Read  ಮಾದಕ ದ್ರವ್ಯ ಸೇವನೆ..! ಶೇ.30 ರಷ್ಟು ಪ್ರಕರಣ ದಾಖಲು..!

error: Content is protected !!
Scroll to Top