ಶಾಸಕರ ಅನುದಾನ ಬಿಡುಗಡೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ.6  ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದ.ಕ ಜಿಲ್ಲೆಯ ಶಾಸಕ ಹರೀಶ್ ಪೂಂಜ, ಇವರ 2018-19ನೇ ಸಾಲಿನ ಅನುದಾನದಲ್ಲಿ ಬೆಳ್ತಂಗಡಿ ತಾಲೂಕು ರೆಖ್ಯಾ ಗ್ರಾಮ ವಿವಿಧೆಡೆಗಳಲ್ಲಿ ಸೋಲಾರ್ ದಾರಿದೀಪ ಅಳವಡಿಕೆ ಕಾಮಗಾರಿಗೆ ರೂ. 2 ಲಕ್ಷ, ಕುವೆಟ್ಟು ಗ್ರಾಮದ ಓಡಿಲ್ನಾಳ ಹಿರಿಯ ಪ್ರಾಥಮಿಕ ಶಾಲೆಗೆ ಸುಣ್ಣ – ಬಣ್ಣ ಅಳವಡಿಸುವುದಕ್ಕೆ ರೂ. 2 ಲಕ್ಷ, ಕೊಕ್ರಾಡಿ ಗ್ರಾಮದ ಮೂಡುಬೈಲು ಕ್ರಾಸ್‍ನಿಂದ ಪುಣ್ಕೆದಬೆಟ್ಟು ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಕಾಂಕ್ರೀಟೀಕರಣಕ್ಕೆ ರೂ. 5 ಲಕ್ಷ, ಬೆಳ್ತಂಗಡಿ ತಾಲೂಕು ಮುಂಡೂರು ಗ್ರಾಮದ 12 ಮನೆಗಳಿಗೆ ಸೋಲಾರ್ ಅಳವಡಿಕೆ ಕಾಮಗಾರಿ ಬಗ್ಗೆ ರೂ. 2 ಲಕ್ಷ, ಬೆಳ್ತಂಗಡಿ ತಾಲೂಕು ಲಾಯಿಲಾ ಗ್ರಾಮದ ಜೋಗಿ ಕಾಲೋನಿ ರಸ್ತೆ ಕಾಂಕ್ರೀಟಿಕರಣಕ್ಕೆ ರೂ. 4 ಲಕ್ಷ, ಬೆಳ್ತಂಗಡಿ ತಾಲೂಕು ಸಾವ್ಯ ಗ್ರಾಮದ ಬಜಿಲಪಾದೆ ಮೀಯೊಟ್ಟು ಪರಿಶಿಷ್ಟ ಜಾತಿ ರಸ್ತೆ ಕಾಂಕ್ರೀಟೀಕರಣಕ್ಕೆ ರೂ. 5 ಲಕ್ಷ, ಬೆಳ್ತಂಗಡಿ ತಾಲೂಕು ಗುರುವಾಯನಕೆರೆ ಶಿಶು ಮಂದಿರ ಕಂಪೌಡ್ ವಾಲ್ ರಚನೆಗೆ ರೂ. 1 ಲಕ್ಷ ಮಂಜೂರು ಮಾಡಲಾಗಿದೆ.

Also Read  ರಕ್ಷಣಾ ಕಾರ್ಯಕ್ಕೆ ಎನ್‌ಡಿಆರ್‌ಎಫ್‌ ತಂಡ , ಹೆಲಿಕಾಪ್ಟರ್ ನಿಯೋಜನೆ ➤ ಸಂಸದೆ ಶೋಭಾ ಕರಂದ್ಲಾಜೆ


2019-20ನೇ ಸಾಲಿನ ಅನುದಾನದಲ್ಲಿ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಜೋಗಿ ಕಾಲೋನಿ ರಸ್ತೆ ಕಾಂಕ್ರೀಟೀಕರಣ (ಮುಂದುವರಿದ ಕಾಮಗಾರಿ) ರೂ. 1 ಲಕ್ಷ ಮಂಜೂರು ಮಾಡಲಾಗಿದೆ.
ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ದ.ಕ ಜಿಲ್ಲೆಯ ಶಾಸಕ ಡಾ.ಭರತ್ ಶೆಟ್ಟಿ ವೈ, ಇವರ 2018-19ನೇ ಸಾಲಿನ ಅನುದಾನದಲ್ಲಿ ಮಂಗಳೂರು ತಾ. ಮೊಗೇರ ಸಂಘ (ರಿ) ಪಂಜಿಮೊಗರು ಮಂಗಳೂರು ಪರಿಶಿಷ್ಟ ಜಾತಿಗೆ ಸೇರಿದ ಮೊಗೇರ ಉಪಜಾತಿಯವರ ಸಂಘದ ವತಿಯಿಂದ ಕಟ್ಟಿಸುತ್ತಿರುವ ಸಮುದಾಯ ಭವನದ ಕಾಮಗಾರಿಗೆ ರೂ. 5 ಲಕ್ಷ, 2019-20ನೇ ಸಾಲಿನ ಅನುದಾನದಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಿ ಚಂದ್ರಶೇಖರ ಲಕ್ಷ್ಮೀ ನಿಲಯ ಮನೆ ನಂ 5-102, ಬೊಲ್ಪುಗುಡ್ಡೆ ಕಾವೂರು ಮಂಗಳೂರು ಇವರ ಮನೆಯ ಪಕ್ಕದ ಸಾರ್ವಜನಿಕ ರಸ್ತೆಗೆ ತಾಗಿಕೊಂಡಿರುವ ಆವರಣಗೋಡೆ ಕಾಮಗಾರಿಗೆ ರೂ. 2 ಲಕ್ಷ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Also Read  ಬೆಳ್ತಂಗಡಿ: ನೆಲಕ್ಕೆ ಬಿದ್ದ ಕೋವಿಯಿಂದ ಆಕಸ್ಮಿಕವಾಗಿ ಹಾರಿದ ಗುಂಡು..! ➤ ವ್ಯಕ್ತಿಗೆ ಗಾಯ

error: Content is protected !!
Scroll to Top