ಅಬ್ಬಕ್ಕ ಉತ್ಸವ 2020 – ಕವಿಗೋಷ್ಠಿಗೆ ಅರ್ಜಿ ಅಹ್ವಾನ

(ನ್ಯೂಸ್ ಕಡಬ) newskadaba.com,  ಮಂಗಳೂರು, ಫೆ.6.  ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಜರಗುವ ಬಹುಭಾಷಾ ಕವಿಗೋಷ್ಠಿಯಲ್ಲಿ ಭಾಗವಹಿಸಲು ಆಸಕ್ತ  ಕವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಕನ್ನಡ, ತುಳು, ಕೊಂಕಣಿ, ಬ್ಯಾರಿ, ಅರೆಭಾಷೆ ಹಾಗೂ ಕನ್ನಡಗಳಲ್ಲಿ ಕನಿಷ್ಠ ಒಂದು ಕವನ ಸಂಕಲನವನ್ನು ಪ್ರಕಟಿಸಿರುವ ಕವಿಗಳಿಗೆ ಈ ಗೋಷ್ಠಿಯಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಆಸಕ್ತರು ತಾವು ಪ್ರಸ್ತುತ ಪಡಿಸಬಯಸುವ ಒಂದು ಕವಿತೆಯೊಂದಿಗೆ ಸಂಪೂರ್ಣ ಸ್ವವಿವರಗಳನ್ನೊಳಗೊಂಡ ಅರ್ಜಿಯನ್ನು ಫೆಬ್ರವರಿ 10 ರೊಳಗೆ ತಲುಪುವಂತೆ ಅಂಚೆ ಅಥವಾ ಮಿಂಚಂಚೆ ಮೂಲಕ  ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳು ಭವನ, ಉರ್ವಸ್ಟೋರ್ ಮಂಗಳೂರು ಇವರಿಗೆ ಸಲ್ಲಿಸಬೇಕು ಎಂದು ಸಹಾಯಕ ನಿರ್ದೇಶಕರ ಪ್ರಕಟಣೆ ತಿಳಿಸಿದೆ.

Also Read  ಸಾರ್ವಜನಿಕ ಮೈದಾನದ ದಾರಿ ಬಂದ್ ಮಾಡಿದ ನೆಕ್ಕಿಲಾಡಿ ಗ್ರಾ.ಪಂ. ➤ ಧರ್ಮಾಧಾರಿತ ರಾಜಕಾರಣದ ಮೂಲಕ ಸಾಮರಸ್ಯ ಒಡೆಯುವ ಯತ್ನ: ಜತೀಂದ್ರ ಶೆಟ್ಟಿ ಆರೋಪ

 

 

error: Content is protected !!
Scroll to Top