ನೂಜಿಬಾಳ್ತಿಲ ಕನ್ವರೆ; ಶ್ರೀರಾಜನ್ ದೈವದ ನೇಮ

(ನ್ಯೂಸ್ ಕಡಬ) newskadaba.com, ಕಡಬ, ಫೆ.6 : ನೂಜಿಬಾಳ್ತಿಲ ಗ್ರಾಮದ ಕನ್ವರೆ ಸಾರಿಮಂಟಮೆ ಶ್ರೀ ರಾಜನ್ ದೈವಸ್ಥಾನದಲ್ಲಿ ರಾಜನ್ ದೈವ ನೇಮ ನಡೆಯಿತು.
ಸೋಮವಾರ ಶ್ರೀ ಸತ್ಯನಾರಾಯಣ ದೇವರ ಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು, ರಾತ್ರಿ 7.30ಕ್ಕೆ ಬಾಳ್ತಿಲ ಚಾವಡಿಯಿಂದ ಶ್ರೀ ರಾಜನ್ ದೈವದ ಭಂಡಾರ ಹಿಡಿದು ಸಾರಿಮಂಟಮೆಗೆ ಬರಲಾಯಿತು. ಮಂಗಳವಾರ ಬೆಳಿಗ್ಗಿನ ಜಾವ ಶ್ರೀರಾಜನ್ ದೈವ ಹಾಗೂ ಗುಳಿಗ ದೈವದ ನೇಮ ನಡೆಯಿತು. ಬಳಿಕ ಶ್ರೀರಾಜನ್ ದೈವಕ್ಕೆ ಹರಕೆ ಸಲ್ಲಿಸಿ ದೈವವು ಸಾರಿಮಂಟಮೆಯಿಂದ ಅಂದಪಾದೆ ಎಂಬಲ್ಲಿಗೆ ಮಾರಿ ಹೋಗಿ ದೈವವು ಸಂಪನ್ನಗೊಂಡಿತು.


ಆಡಳಿತ ಮಂಡಳಿಯ ಜಿನಚಂದ್ರ ಶೆಟ್ಟಿ ಬಾಳ್ತಿಲ, ಬಾಬು ಗೌಡ ಕುಕ್ಕುತ್ತಡಿ, ಮಹಾವೀರ ಜೈನ್ ಡೆಪ್ಪುಣಿ, ವಿಶ್ವನಾಥ ರೈ ಐಲ, ಜಗನ್ನಾಥ ಗೌಡ ಕೊಡೆಂಕಿರಿ, ಲಿಂಗಪ್ಪ ಗೌಡ ಕೋಡಿಗದ್ದೆ, ರಾಮಚಂದ್ರಗೌಡ ಬಾಳ್ತಿಲ, ಸೇಸಪ್ಪ ಗೌಡ ಮಜಲಡ್ಡ, ಡೀಕಯ್ಯ ಗೌಡ ಪಾಲೆತ್ತಡಿ, ಹರಿಶ್ಚಂದ್ರ ಗೌಡ ಕನ್ವಾರೆ, ಕೊರಗಪ್ಪ ಗೌಡ ಪಾಲೆತ್ತಡಿ, ಜಿನೇಂದ್ರ ಇಂದ್ರ, ಧರಣೇಂದ್ರ ಇಂದ್ರ ಬಸ್ತಿ, ಪುರುಷೋತ್ತಮ ಗೌಡ ಕುಕ್ಕುತ್ತಡಿ, ಊರಿನ ಹತ್ತುಸಮಸ್ತರು ಸೇರಿದಂತೆ ಊರ ಪರವೂರ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡು ದೈವ ಕೃಪೆಗೆ ಪಾತ್ರರಾದರು.
ದೈವದ ಪರಿಚಾರಕರಾದ ಧರ್ಣಪ್ಪ ಗೌಡ ಪೆಲತ್ತಡಿ, ದೈವದ ಪೂಜಾರಿಯಾಗಿ ಕರ್ತವ್ಯ ನಿರ್ವಹಿಸಿದರೆ, ದೈವ ನರ್ತಕರಾದ ಸೋಮಶೇಖರ ಕಲ್ಲುಗುಡ್ಡೆ, ಧರ್ಣಪ್ಪ ಕಲ್ಲುಗುಡ್ಡೆ ದೈವದ ನರ್ತನೆಯನ್ನು ನೆರವೇರಿಸಿದರು.

Also Read  ಕಡಬ ಸೇರಿದಂತೆ ಕರಾವಳಿಯ ಹಲವೆಡೆ ಭಾರೀ ಗುಡುಗು ► ಕಾದು ಕೆಂಪಾಗಿದ್ದ ಇಳೆಗೆ ತಂಪೆರೆದ ಮಳೆ

error: Content is protected !!
Scroll to Top