ಶಾಸಕರ ಅನುದಾನ ಬಿಡುಗಡೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಫೆ. 5 ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪುತ್ತೂರು ಶಾಸಕ  ಸಂಜೀವ ಮಠಂದೂರು, ಇವರ 2018-19ನೇ ಸಾಲಿನ ಅನುದಾನದಲ್ಲಿ ಪುತ್ತೂರು ತಾಲೂಕು ಕಬಕ ಗ್ರಾಮದ ಪೋಳ್ಯ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಶೌಚಾಲಯ ನಿರ್ಮಾಣ ಕಾಮಗಾರಿಗೆ ರೂ. 3 ಲಕ್ಷ, ಪುತ್ತೂರು ತಾಲೂಕು 34 ನೆಕ್ಕಿಲಾಡಿ ಗ್ರಾಮದ ಬೊಳಂತಿಲ ಹೊಸ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 3.09. ಲಕ್ಷ, ಪುತ್ತೂರು ನಗರಸಭಾ ವ್ಯಾಪ್ತಿಯ 7ನೇ ವಾರ್ಡ್ ಚಿಕ್ಕ ಮುಡ್ನೂರು ಕೃಷ್ಣನಗರ ಜಯರಾಮ ರೈ ಇವರ ಮನೆಗೆ ಹೋಗುವ ಕಾಂಕ್ರೀಟ್ ರಸ್ತೆ ಮುಂದುವರಿದ ಕಾಮಗಾರಿಗೆ ರೂ 2 ಲಕ್ಷ, ಪುತ್ತೂರು ನಗರಸಭಾ ವ್ಯಾಪ್ತಿಯ 26ನೇ ವಾರ್ಡ್ ದುರ್ಗಾನಗರದಲ್ಲಿ ಚರಂಡಿ ರಚನೆಗೆ ರೂ 1 ಲಕ್ಷ, ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಬೋಳೋಡಿ ಪಟ್ಟೆತಡ್ಕೆ ಕೊಡಂಕಿರಿ ರಸ್ತೆ ಅಭಿವೃದ್ಧಿಗೆ ರೂ 1 ಲಕ್ಷ, ಪುತ್ತೂರು ತಾಲೂಕು ಕುಂಬ್ರ ಬೊಳ್ಳಾಡಿ ರಾಜಮಾಡ ರಸ್ತೆ ಅಭಿವೃದ್ಧಿಗೆ ರೂ 4.98,500 ಲಕ್ಷ, ಪುತ್ತೂರು ತಾಲೂಕು ನಿಡ್ಬಳ್ಳಿ ನುಳಿಯಾಲು ತರವಾಡು ಮನೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ 5 ಲಕ್ಷ, ಪುತ್ತೂರು ತಾಲೂಕು ಉಪ್ಪಿನಂಗಡಿ ಗ್ರಾಮದ ರಾಮನಗರ ನಂದಿಕೇಶ್ವರ ಭಜನಾ ಮಂದಿರ ಬಳಿ ಇಂಟರ್ಲಾಕ್ ಅಳವಡಿಕೆ ಕಾಮಗಾರಿಗೆ ರೂ 2 ಲಕ್ಷ, ಪುತ್ತೂರು ತಾಲೂಕು ಇರ್ದೆ ಉಪ್ಪಳಿಗೆ ಶಾಲಾ ಸಂಪರ್ಕ ರಸ್ತೆ ಅಭಿವೃದ್ಧಿಗೆ ರೂ 3 ಲಕ್ಷ ಮಂಜೂರು ಮಾಡಲಾಗಿದೆ.

Also Read  ಮಾಣಿ: ಬದ್ರಿಯಾ ಜುಮಾ ಮಸೀದಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಆಚರಣೆ - ಹಿಂದೂ ಬಾಂಧವರಿಂದ ತಂಪು ಪಾನೀಯ ನೀಡಿ ಶುಭಹಾರೈಕೆ

ಪುತ್ತೂರು ಶಾಸಕ ಸಂಜೀವ ಮಠಂದೂರು ಇವರ 2019-20ನೇ ಸಾಲಿನ ಅನುದಾನದಲ್ಲಿ ಬಂಟ್ವಾಳ ತಾಲೂಕು ಬಿಳಿಯೂರು ಗ್ರಾಮದ ಕರುವೇಲು ಮಾಡತ್ತಾರು ರಸ್ತೆ ಅಭಿವೃದ್ಧಿಗೆ ರೂ 3 ಲಕ್ಷ, ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ಕುರಿಕ್ಕಾರ ಎಂಬಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿಗೆ ರೂ 2.50 ಲಕ್ಷ, ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಬೆಳಿಯೂರು ಕಟ್ಟೆ ಸಾಜ ಪರಿಶಿಷ್ಟ ಪಂಗಡ ಕಾಲನಿ ರಸ್ತೆ ದುರಸ್ಥಿ ಕಾಮಗಾರಿಗೆ ರೂ 2.29,617 ಲಕ್ಷ, ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ವಡ್ಯರ್ಪೆ ಎಂಬಲ್ಲಿ ಸೇತುವೆ ಕೂಡು ರಸ್ತೆ ನಿರ್ಮಾಣಕ್ಕೆ ರೂ 5 ಲಕ್ಷ, ಬಂಟ್ವಾಳ ತಾಲೂಕು ಕೆದಿಲ ಕಂಪ ಗ್ರಾಮದ ರಸ್ತೆ ಅಭಿವೃದ್ಧಿಗೆ ರೂ 5 ಲಕ್ಷ, ಬಂಟ್ವಾಳದ ತಾಲೂಕು ಕೆದಿಲ ಗ್ರಾಮದ ಕರಿಮಜಲು ಕಂಪ ರಸ್ತೆ ಅಭಿವೃದ್ಧಿಗೆ ರೂ 5 ಲಕ್ಷ, ಬಂಟ್ವಾಳ ತಾಲೂಕು ಬಿಲಿಯೂರು ಗ್ರಾಮದ ಬೆದ್ರ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ 1 ಲಕ್ಷ, ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಬೆಳಿಯೂರು ಕಟ್ಟೆ ಸಾಜ ರಸ್ತೆ ದುರಸ್ಥಿ ಮುಂದುವರಿದ ಕಾಮಗಾರಿಗೆ ರೂ 5 ಲಕ್ಷ, ಬಂಟ್ವಾಳ ತಾಲೂಕು ಪೆರ್ನೆ ಗ್ರಾಮದ ಕಡಂಬು ದೇವದಾರು ರಸ್ತೆ ಅಭಿವೃದ್ಧಿ ರೂ 3.50 ಲಕ್ಷ, ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮೈಕೆ ಏಮಾಜೆ ರಸ್ತೆ ಆಯ್ದ ಭಾಗಗಳ ದುರಸ್ಥಿಗೆ ರೂ 5 ಲಕ್ಷ, ಪುತ್ತೂರು ತಾಲೂಕು ಪಡ್ನೂರು ಗ್ರಾಮದ ರಾಮನಗರ ಎಂಬಲ್ಲಿ ರಸ್ತೆ ಅಭಿವೃದ್ಧಿಗೆ ರೂ 2,17258 ಲಕ್ಷ, ಪುತ್ತೂರು ತಾಲೂಕು ಬಲ್ನಾಡು ಗ್ರಾಮದ ಬೆಳಿಯೂರು ಕಟ್ಟೆ ಸಾಜ ರಸ್ತೆ ದುರಸ್ಥಿ ಮುಂದುವರಿದ ಕಾಮಗಾರಿಗೆ ರೂ 1,40,383 ಲಕ್ಷ, ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮೈಕೆ ಏಮಾಜೆ ರಸ್ತೆ ಆಯ್ದ ಭಾಗಗಳ ದುರಸ್ಥಿ ರೂ 5 ಲಕ್ಷ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

Also Read  ಮಾರ್ ಇವಾನಿಯೋಸ್ ಕಾಲೇಜು: ವಿಶ್ವ ಯೋಗ ದಿನಾಚರಣೆ.

error: Content is protected !!
Scroll to Top